RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ರಡ್ಡೇರಟ್ಟಿ ಗಣಪತಿ ಮಹಾರಾಜರ ಜಾತ್ರೆ ಮಹೋತ್ಸವ

ಗೋಕಾಕ:ರಡ್ಡೇರಟ್ಟಿ ಗಣಪತಿ ಮಹಾರಾಜರ ಜಾತ್ರೆ ಮಹೋತ್ಸವ 

ರಡ್ಡೇರಟ್ಟಿ ಗಣಪತಿ ಮಹಾರಾಜರ ಜಾತ್ರೆ ಮಹೋತ್ಸವ

 

 

ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 8 :

 

 

ಸಮೀಪದ ರಡ್ಡೇರಟ್ಟಿ ಗ್ರಾಮದ ಶ್ರೀ ಗಣಪತಿ ಮಹಾರಾಜರ ಮಠದ ರಥೋತ್ಸವವು ಯುಗಾದಿಯಂದು ಸಂಭ್ರಮದಿಂದ ಜರುಗಿತು.
ಊರ ಹೊರವಲಯದಲ್ಲಿರುವ ಗಣಪತಿ ಮಹಾರಾಜರ ಮಠದ ವಾಡಿಕೆಯಂತೆ ಪ್ರತಿವರ್ಷ ಯುಗಾದಿಪಾಡ್ಯದಂದು ಜಾತ್ರೆ ಜರುಗುತ್ತದೆ. ಅದರಂತೆ ಶನಿವಾರ ಜನಸಾಗರದ ಮಧ್ಯೆ ರಥ ಪೂರ್ವಾಭಿಮುಖವಾಗಿ ಪಾದಗಟ್ಟೆಯವರೆಗೆ ಪಲ್ಲಕ್ಕಿ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಚಲಿಸಿತು. ಜನರು ಹರಹರ ಮಹಾದೇವ ಎಂದು ಕೂಗುವ ದೃಶ್ಯ ಮುಗಿಲು ಮುಟ್ಟುವಂತಿತ್ತು. ಭಕ್ತರು ತೇರಿಗೆ ಬೆಂಡು-ಬೆತ್ತಾಸ ಕಾರಿಕು, ನಾಣ್ಯಗಳನ್ನು ತೂರಿ ಹರಕೆ ಪೂರೈಸಿಕೊಂಡರು. ಮುಂಜಾನೆಯಿಂದ ಜಾತ್ರೆಯ ನಿಮಿತ್ಯ ಗ್ರಾಮದ ಜನ ಸಡಗರದಿಂದ ಸಂಭ್ರಮಿಸುತ್ತಿದ್ದರು. ಹೆಣ್ಣುಮಕ್ಕಳು ಅಡಿಗೆ ಮಾಡಿಕೊಂಡು ದೇವರಿಗೆ ನೈವೇದ್ಯೆ, ಕಾಯಿ-ಕರ್ಪೂರ ಸಮರ್ಪಿಸಿ, ಬಳೆತೊಟ್ಟುಕೊಳ್ಳುವ ದೃಶ್ಯಗಳು ಕಂಡುಬಂದವು. ಜನರು ಜಾತ್ರೆಗೆ ಟೆಂಟು ಹಾಕಿದ ಅಂಗಡಿ ಮುಗ್ಗಟ್ಟುಗಳ ಸುತ್ತ ತಿರುಗುತ್ತಿದ್ದರು. ಸಣ್ಣಮಕ್ಕಳು ಆಯ್ಸಕ್ರೀಮ್, ಜ್ಯೂಸ್ ಬಾಟಲಿಗಳ ಬೆನ್ನತ್ತಿದ್ದರು. ಸಾಯಂಕಾಲ 5:30 ಗಂಟೆಗೆ ರಥೋತ್ಸವ ಸಡಗರದಿಂದ ಸಾಂಗಗೊಂಡಿತು. ರಾತ್ರಿ ಬಯಲಾಟ ಜರುಗಿತು. ಮರುದಿನ ಸಂಗ್ರಾಮ ಕಲ್ಲುಗಳನ್ನು ಎತ್ತುವ ಸ್ಪರ್ಧೆ ಜರುಗಿದವು.

Related posts: