RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಸಮಾಜ ಮುಖಿಯಾಗಿ ಜೀವನ ಸಾಗಿಸಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ : ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಜಿ

ಘಟಪ್ರಭಾ:ಸಮಾಜ ಮುಖಿಯಾಗಿ ಜೀವನ ಸಾಗಿಸಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ : ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಜಿ 

ಸಮಾಜ ಮುಖಿಯಾಗಿ ಜೀವನ ಸಾಗಿಸಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ : ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಜಿ

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ ,9 :

 
ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರು ಸಮಾಜ ಮುಖಿಯಾಗಿ ಜೀವನ ಸಾಗಿಸಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಸಮೀಪದ ಅರಭಾಂವಿಮಠದ ಜಗದ್ಗುರು ಶ್ರೀ ದುರದುಂಡೀಶ್ವರ ಪುಣ್ಯಾರಣ್ಯ ಸಂಸ್ಥಾನಮಠದ ಯಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಳ್ಳಲಾದ ಗುರುವಂದನಾ ಸಮಾರಂಭ ಹಾಗೂ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ಮನುಷ್ಯನಿಗೆ ಗುರುವಿನ ಮಾರ್ಗದರ್ಶನ ಅತ್ಯಂತ ಅವಶ್ಯಕ ಹಾಗಾಗಿ ಸದಾಕಾಲ ಗುರುವಿನ ಮಹಾತ್ಮೆಯನ್ನು ಆಲಿಸುತ್ತ ಬದುಕನ್ನು ಸಾಗಿಸಬೇಕು ಆ ಮೂಲಕ ಬದುಕಿನ ಜಂಜಾಟಗಳಿಂದ ಮುಕ್ತಿ ಹೊಂದಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮ ನೇತೃತ್ವವನ್ನು ವಹಿಸಿದ್ಧ ಹಂದಿಗುಂದದ ಪರಮ ಪೂಜ್ಯರಾದ ಶ್ರೀ ಶಿವಾನಂದ ಮಹಾಸ್ವಾಮಿಗಳು ಮಾತನಾಡಿ ಪುಣ್ಯಕ್ಷೇತ್ರಗಳಿಗೆ. ಮಹಾತ್ಮರ ಸನ್ನಿದಾನಕ್ಕೆ ಬರುವಾಗ ಭವ ಬಂಧನದಿಂದ ಮುಕ್ತರಾಗಿ ನಿರ್ಮಲ ಹೃದಯದವರಾಗಿ ಮಹಾತ್ಮರ ಸೇವೆಯನ್ನು ಮಾಡಬೇಕು ಎಂದು ಹೇಳಿದರು.
ಘಟಪ್ರಭಾ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಮಾಜಕ್ಕೆ ದೇಶಕ್ಕೆ ಸಂಸ್ಕøತಿ ಎಂಬುದು ತುಂಬಾ ಮುಖ್ಯ ಅಂತಹ ಸಂಸ್ಕøತಿ ಸಂಸ್ಕಾರವನ್ನು ಇಂದು ಮಠಗಳಲ್ಲಿ ಮಾತ್ರ ಕಾಣಬಹುದಾಗಿದೆ. ಅದಕ್ಕೆ ಸಾಕ್ಷಿ ನಮ್ಮ ಶ್ರೀ ದುರದುಂಡೀಶ್ವರ ಪುಣ್ಯಾರಣ್ಯ ಮಠ ಎಂದರು.
ಕಾರ್ಯಕ್ರಮದಲ್ಲಿ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಶ್ರೀ ಶಿವಾನಂದ ಕೌಜಲಗಿ ಹಾಗೂ ಡ್ರಾಮಾ ಜೂನಿಯರ್ಸ ಸೀಜನ್ 3ರ ವಿಜೇತೆ ಕು. ಸ್ವಾತಿ ನಿಪನಾಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಡಕೋಳ ವಿರಕ್ತಮಠÀದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಬೆಂಗಳೂರು ಶಿವಯೋಗೀಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕಡೋಲಿ ವಿರಕ್ತಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು, ಹುಕ್ಕೇರಿ ವಿರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಘಟಪ್ರಭಾ ಹೊಸಮಠದ ಶ್ರೀ ವಿರುಪಾಕ್ಷಿ ದೇವರು, ಶೇಗುಣಸಿ ವಿರಕ್ತಮಠದ ಶ್ರೀ ಮಹಾಂತದೇವರು ಉಪಸ್ಥಿತರಿರುವರು.
ಶ್ರೀ ಶಿವಯ್ಯಾ ಶಾಸ್ತ್ರಿಗಳು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸುರೇಶ ಮುದ್ದಾರ ನಿರೂಪಿಸಿ ವಂದಿಸಿದರು.

Related posts: