RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ

ಬೆಳಗಾವಿ:ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ 

ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ : ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಡಗಾವಿ ಜನ

ಬೆಳಗಾವಿ ಜು 8: ಮಹಾನಗರದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಎಂಟು ದಿನಕ್ಕೊಮ್ಮೆ ಬರುವ ಜಲಮಂಡಳಿಯ ನೀರು ಕಲುಶಿತಗೊಂಡಿದ್ದು, ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಮಹಾನಗರ ಪಾಲಿಕೆಯ 14ನೇ ವಾರ್ಡನ ವಡಗಾವಿ ಮಲಪ್ರಭಾ ನಗರ ಹಾಗೂ ಸುತ್ತಲ ಪ್ರದೇಶಗಳಲ್ಲಿ ಕುಡಿಯಲು ಬಂದ ಅಶುದ್ಧ ನೀರು ಬಾಟಲಿಗಳಲ್ಲಿ ಪ್ರದರ್ಶಿಸಿ ಜನತೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾರಕ್ಕೊಮ್ಮೆ ಬರುವ ಕುಡಿಯುವ ನೀರು ಗರಿಷ್ಠ 1 ತಾಸು ಮಾತ್ರ ಬರುತ್ತಿದ್ದ ಜನ ಪರಸ್ಪರ ಬಡಿದಾಡಿಕೊಂಡು ಕಲುಷಿತ ನೀರು ಸಂಗ್ರಹಿಸಿ ಕುಡಿಯಲು ಬಳಕೆ ಮಾಡುವ ಅನಿವಾರ್ಯಕ್ಕೆ ಒಳಗಾಗಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ವಿರುದ್ದ ವಡಗಾವಿ, ಖಾಸಭಾಗ, ಮಲಪ್ರಭಾ ನಗರ, ಸಂಭಾಜಿನಗರದ ಜನತೆ ಅಸಹಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗಗಳಲ್ಲಿ ಬಾವಿಗಳು ಸಾಕಷ್ಟಿದ್ದರೂ ಅವು ಕೂಡ ಬತ್ತಿ ಹೋಗಿ ಜನತೆಗೆ ಹಾಹಾಕಾರ ಉಂಟಾಗಿದೆ. ವಾರ್ಡ ನಂ. 14 ರಲ್ಲಿ ದಿನೇಶ ರಾವಳ ನಗರಸೇವಕರಾಗಿದ್ದು ಪಾಲಿಕೆಯಿಂದ ಯಾವ ರೀತಿ ತಮ್ಮ ವಾರ್ಡಗೆ ಶುದ್ಧ ನೀರು ಒದಗಿಸಿಕೊಡುವರು ಎಂಬ ಬಗ್ಗೆ ಕಾಯ್ದು ನೋಡಬೇಕಿದೆ. ಕಾಲರಾ ಹಾಗೂ ಸಾಂಕ್ರಾಮಿಕ ರೋಗಗಳು ಮೊದಲು ಇದೇ ಪ್ರದೇಶಗಳಲ್ಲಿ ವರದಿಯಾಗುತ್ತವೆ.

ಅಶುದ್ದ ಕುಡಿಯುವ ನೀರು, ವಿಪರೀತ ಸೊಳ್ಳೆ ಹಾವಳಿಯಿಂದ ಜನಜೀವನ ಅಸ್ವಸ್ಥಗೊಂಡಿದ್ದು ಆಡಳಿತ ತತಕ್ಷಣ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ. ಕಳೆದ ಒಂದು ವರ್ಷದಿಂದ ಇಲ್ಲಿ ಸತತ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಜನ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ

Related posts: