RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಂಸದ ಸುರೇಶ ಅಂಗಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ-ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಸಂಸದ ಸುರೇಶ ಅಂಗಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ-ಸಚಿವ ಸತೀಶ ಜಾರಕಿಹೊಳಿ 

ಸಂಸದ ಸುರೇಶ ಅಂಗಡಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿಲ್ಲ-ಸಚಿವ ಸತೀಶ ಜಾರಕಿಹೊಳಿ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.12-

 
ಸಂಸದ ಸುರೇಶ ಅಂಗಡಿ ಅವರು ಮೂರು ಅವಧಿಗೆ ಆಯ್ಕೆಯಾಗಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಜನತೆಯ ಯಾವುದೇ ಸಮಸ್ಯೆಗೆ ಸ್ಪಂದಿಸಿರುವದಿಲ್ಲ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ನಗರದ ಸಮುದಾಯ ಭವನದಲ್ಲಿ ಜರುಗಿದ ಕಾಂಗ್ರೆಸ ಕಾರ್ಯಕರ್ತರ ಕಿಕ್ಕಿರಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಥಮ ಬಾರಿಗೆ ವಾಜಪೇಯಿ, ಎರಡನೇ ಬಾರಿ ಯಡಿಯೂರಪ್ಪ ಹಾಗೂ ಮೂರನೇ ಬಾರಿ ನರೇಂದ್ರ ಮೋದಿ ಅಲೆಯಲ್ಲಿ ಚುನಾಯಿತರಾದ ಸುರೇಶ ಅಂಗಡಿ ಅವರು ಕೇಂದರ ಸರಕಾರದ ಯಾವ ಯೋಜನೆಗಳನ್ನು ತಾರದೆ ಬರಿಯ ಮೋದಿ ಅವರನ್ನು ನೋಡಿ ಮತ ಹಾಕಿ ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ.
ಕ್ಷೇತ್ರದ ಯುವಕರಿಗೆ ಉದ್ಯೋಗ ಬೇಕಾಗಿದೆ. ಆದರೆ ಕೇಂದ್ರದಿಂದ ಯಾವ ಔದ್ಯೋಗಿಕ ಯೋಜನೆ ತಾರದೆ ಬರಿಯ ಜನತೆಗೆ ಸುಳ್ಳು ಹೇಳುತ್ತ ನಡೆದಿದ್ದಾರೆ. ಅವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಲೇಳಿಕೊಂಡರಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವಾಗ ನೀಡಿದ ಯಾವ ಆಶ್ವಾಸನೆಯನ್ನೂ ಈಡೇರಿಸಿಲ್ಲ. ಜನಸಾಮಾನ್ಯರ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯಲು ಜನತೆಗೆ ಪಾಕಿಸ್ತಾನವನ್ನು ತೋರಿಸಿ ಮತ ಕೇಳುತ್ತಿರುವದು ಅತ್ಯಂತ ದುರ್ದೈವದ ಸಂಗತಿ ಎಂದರು.
ಕಾಂಗ್ರೆಸ ಅಭ್ಯರ್ಥಿ ಡಾ. ವ್ಹಿ.ಎಸ್. ಸಾಧುನವರ ಅವರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಅನುಭವವಿದ್ದು ಅವರು ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವರೆಂಬ ವಿಶ್ವಾಸದಿಂದ ಕಾಂಗ್ರೆಸ ಪಕ್ಷ ತಿಕೀಟು ನೀಡಿದ್ದು ಅವರನ್ನು ಅತೀ ಹಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು.
ಗೋಕಾಕ ಮತಕ್ಷೇತ್ರ ಕಾಂಗ್ರೆಸ ಪಕ್ಷದ ಭದ್ರಕೋಟೆಯಾಗಿದೆ. ಕಳೆದ 20 ವರ್ಷಗಳಿಂದ ಕಾಂಗ್ರೆಸ ಪಕ್ಷ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಿಂದೆ ಕೆಲವೇ ಕೆಲವು ಜನರ ಕೈಯಲ್ಲಿ ಇದ್ದ ಸಂಸ್ಥೆಗಳನ್ನು ವಶಕ್ಕೆ ಪಡೆದು ಅವುಗಳಲ್ಲಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಎಲ್ಲ ಸಮಾಜಗಳ ಜನರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದ ಸತೀಶ ಜಾರಕಿಹೊಳಿ ಅವರು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರದ ಜವಾಬ್ದಾರಿಯನ್ನು ಯುವ ಮುಖಂಡ ಲಖನ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು ಅವರ ನೇತೃತ್ವದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷಕ್ಕೆ 32 ಸಾವಿರ ಮತಗಳ ಅಂತರ ನೀಡಲಾಗಿತ್ತು. ಈ ಸಾರೆ ಅದಕ್ಕಿಂತ ಹೆಚ್ಚು ಲೀಡ್ ನೀಡಬೇಕೆಂದು ಹೇಳಿದರು.
ಯುವ ಮುಖಂಡ ಲಖನ್ ಜಾರಕಿಹೊಳಿ ಅವರು ಮಾತನಾಡಿ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ ಪಕ್ಷಕ್ಕೆ ಗೋಕಾಕ ಮತಕ್ಷೇತ್ರದಲ್ಲಿ ಭದ್ರ ನೆಲೆ ಇದೆ. ನಾವೆಲ್ಲರೂ ಕಾಂಗ್ರೆಸ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿದ್ದು ಸಚಿವ ಸತೀಶ ಜಾರಕಿಹೊಳಿ, ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ ಅಭ್ಯರ್ಥಿ ಡಾ, ವ್ಹಿ.ಎಸ್.ಸಾಧುನವರ ಅವರು ಹೆಚ್ಚಿನ ಮತಗಳಿಂದ ಆರಿಸಿ ತರೋಣ ಎಂದರು.
ಕಾಂಗ್ರೆಸ ಅಭ್ಯರ್ಥಿ ಡಾ. ವ್ಹಿ. ಎಸ್. ಸಾಧುಬವರ ಮಾತನಾಡಿ ಕೇಂದ್ರ ಬಿಜೆಪಿ ಸರಕಾರ ನೋಟುಗಳನ್ನು ರದ್ದು ಪಡಿಸಿ ಅರಾಜಕತೆ ನಿರ್ಮಾಣ ಮಾಡಿ ಆರ್ಥಿಕ ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಅಲ್ಲದೆ ನಿರುದ್ಯೋಗದ ಸಮಸ್ಯೆ ತಾಂಡವಾಡುತ್ತಿದೆ. ಬೆಲೆಯೇರಿಕೆ ಹೆಚ್ಚಾಗಿದೆ. ಹೀಗಾಗಿ ಜನರ ಜೀವನ ನಡೆಸುವದೇ ದುಸ್ತರವಾಗಿದೆ, ಸಂಸದ ಸುರೇಶ ಅಂಗಡಿ ಅವರ ಸಾಧನೆ ಶೂನ್ಯವಾಗಿದೆ ಎಂದು ಹೇಳಿದರಲ್ಲದೆ ತಾವು ಚುನಾಯಿತರಾದರೆ ಗೋಕಾಕ ಪ್ರವಾಸಿ ಕೇಂದ್ರ ಮಾಡುವ ಭರವಸೆ ನೀಡಿದರು.
ಕಾಂಗ್ರೆಸ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ನಗರಾಧ್ಯಕ್ಷರುಗಳಾದ ಎಸ್.ಎ.ಕೊತವಾಲ, ಸಿದ್ಧಲಿಂಗ ದಳವಾಯಿ, ಪ್ರಭಾ ಶುಗರ್ಸ ಚೇರಮನ್ ಅಶೋಕ ಪಾಟೀಲ ಮಾತನಾಡಿ ಕಾಂಗ್ರೆಸ ಅಭ್ಯರ್ಥಿ ಡಾ. ವ್ಹಿ.ಎಸ್.ಸಾಧುನವರ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಕಾಂಗ್ರೆಸ ನಗರ ಬ್ಲಾಕ್ ಅಧ್ಯಕ್ಷ ನಜೀರಅಹಮ್ಮದ ಶೇಖ, ಹಾಜಿ ಕುತುಬುದ್ದೀನ ಗೋಕಾಕ, ಬಸವರಾಜ ಸಾಯಣ್ಣವರ ಇದ್ದರು.

Related posts: