RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಅಂಬೇಡಕರರಂಥ ಛಲ, ಹಠ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು.

ಗೋಕಾಕ:ಅಂಬೇಡಕರರಂಥ ಛಲ, ಹಠ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು. 

ಅಂಬೇಡಕರರಂಥ ಛಲ, ಹಠ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು.
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಎ.14-
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡಕರರ ತತ್ವಾದರ್ಶಗಳನ್ನು ಮನದಲ್ಲಿ ತುಂಬಿಕೊಂಡು ಅವರ ದಿನಾಚರಣೆ ಆಚರಿಸಿದರೆ ಅದಕ್ಕೆ ಮಹತ್ವ ಬರುವದೆಂದು ಗೋಕಾಕ ಡಿವೈಎಸ್‍ಪಿ ಪ್ರಭು ಡಿ.ಟಿ. ಹೇಳಿದರು.
ರವಿವಾರದಂದು ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಡಾ. ಅಂಬೇಡಕರರ ಚೇತನ ಜ್ವಾಲೆಯಾಗಿ ಉರಿಯದಿದ್ದರೆ ದಲಿತರು ಕತ್ತಲೆಯಲ್ಲಿಯೇ ಜೀವಿಸಬೇಕಾಗುತ್ತಿತ್ತು. ಪ್ರಗಾಢ ಪಂಡಿತರಾಗಿದ್ದ ಅವರು ಇಡೀ ಜಗತ್ತಿಗೆ ದಾರಿದೀಪವಾದರು. ಅಂಬೇಡಕರರಂಥ ಛಲ, ಹಠ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು.
ಅಂಬೇಡಕರರು ತಮ್ಮ ಸಾಮಥ್ರ್ಯದ ಬಲದಿಂದ ಮೇಲಕ್ಕೇರಿ ಶತ-ಶತಮಾನಗಳಿಂದ ಅಸ್ಪøಶ್ಯತೆ, ಶೋಷಣೆಗೆ ಒಳಗಾಗಿದ್ದ ದಲಿತ ಸಮುದಾಯಕ್ಕೆ ಸಂವಿಧಾನದ ಮೂಲಕ ಹಕ್ಕನ್ನು ನೀಡಿ ಅವರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಿದರು. ಪ್ರತಿಯೊಬ್ಬನು ವಿದ್ಯಾರ್ಥಿ ಇದ್ದಾಗಲೇ ಸಂವಿಧಾನವನ್ನು ಅರಿತು ಮನದಟ್ಟು ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ಗಣರಾಜ್ಯ ಎಂಬ ಶಬ್ದವನ್ನು ಅಳವಡಿಸುವ ಮೂಲಕ ಪ್ರಜೆಗಳಿಂದಲೇ ಸರಕಾರ ನಡೆಯುವಂತೆ ರೂಪಿಸಿದ ಮಹಾನ್ ವ್ಯಕ್ತಿ ಡಾ. ಅಂಬೇಡಕರ ಎಂದರು.
ಡಾ. ಅಂಬೇಡಕರರು ಆರ್ಥಿಕ, ಕಾನೂನು, ಶೈಕ್ಷಣಿಕ ಹಾಗೂ ರಾಜಕೀಯವನ್ನು ಆಳವಾಗಿ ಅಧ್ಯಯನ ಮೂಲಕ ಪಂಡಿತರಾಗಿದ್ದರಲ್ಲದೆ ಇಡೀ ಸಮಾಜ ಶೋಷಣೆಯಿಂದ ಮುಕ್ತವಾಗಬೇಕೆಂದು ಇಡೀ ಜೀವಮಾನ ಶ್ರಮಿಸಿದರೆಂದು ಪ್ರಭು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ ಡಾ. ಅಂಬೇಡಕರರು ಸಂವಿಧಾನ ರಚನೆಯ ಸಂದರ್ಭದಲ್ಲಿ ಇಡೀ ಜಗತ್ತಿನ ದೇಶಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ನಡೆಸಿ ಬಹು ಭಾಷಾ, ಬಹು ಸಂಸ್ಕøತಿ ಹಾಗೂ ವಿವಿಧತೆ ಹೊಂದಿದ ಭಾರತಕ್ಕೆ ಹೊಂದಾಣಿಕೆ ಆಗುವ ಸಂವಿಧಾನ ರಚಿಸಿದ್ದು ಹೆಮ್ಮೆಯ ವಿಷಯ. ಶತಮಾನದಿಂದ ಅಸ್ಪøಶ್ಯತೆ ಹಾಗೂ ಶೋಷಣೆಗೆ ಒಳಗಾದ ದಲಿತ ಸಮುದಾಯಕ್ಕೆ ಹಕ್ಕುಗಳನ್ನು ನೀಡಿ ದಲಿತ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಬಹುವಾಗಿ ಶ್ರಮಿಸಿದರು ಎಂದರು.
ರಾಮದುರ್ಗದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ|| ಜಗದೀಶ ತಳವಾರ ಅವರು ಡಾ|| ಬಿ.ಆರ್.ಅಂಬೇಡ್ಕರ್ ಅವರು ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲದಾರ ರಮೇಶ ರೇವಡಿಗಾರ, ನಗರಸಭೆ ಸಹಾಯಕ ಅಭಿಯಂತರ ವಿ.ಎಸ್.ತಡಸಲೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಗಾರ, ಎ.ಸಿ.ಮನ್ನಿಕೇರಿ, ದಲಿತ ಮುಖಂಡರಾದ ರಮೇಶ ಮಾದರ, ಸತ್ತೆಪ್ಪ ಕರವಾಡಿ, ಲಕ್ಷ್ಮಣ ತೆಳಗಡೆ, ಬಬಲೆಪ್ಪ ಮಾದರ, ಮನೋಹರ ಅಜ್ಜನಕಟ್ಟಿ, ಅಜೀತ ಹರಿಜನ, ಬಾಳೇಶ ಸಂತವ್ವಗೋಳ, ಕಾಡಪ್ಪ ಮೇಸ್ತ್ರಿ, ಶಿವಾನಂದ ಹೊಸಮನಿ, ಶಂಕರ ಖಿಲಾರಿ, ಬಸು ಕಾಡಾಪೂರ, ಸುಧಾ ಮುರಕುಂಬಿ, ಸುಂದರವ್ವ ಕಟ್ಟಿಮನಿ,ಗೀತಾ ಸಣ್ಣಕ್ಕಿ, ಸೇರಿದಂತೆ ಅನೇಕರು ಇದ್ದರು.
ಶ್ರೀಕಾಂತ ಶೀಗಿಹೊಳಿ ಸ್ವಾಗತಿಸಿದರು, ಕೃಷ್ಣಾ ಹಕಾತಿ ನಿರೂಪಿಸಿದರು, ಡಿ.ಆರ್.ಗೌಡಿ ವಂದಿಸಿದರು.
ಕಾರ್ಯಕ್ರಮದ ಮುನ್ನ ಮಿನಿ ವಿಧಾನಸೌಧದಲ್ಲಿ ಇರುವ ಡಾ. ಅಂಬೇಡಕರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಅವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾ.ಪಂ. ಸಭಾಭವನಕ್ಕೆ ತಲುಪಿತು.

Related posts: