RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ: ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ

ಗೋಕಾಕ: ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ 

ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ

ಗೋಕಾಕ ಜು 8 : ಕಳೆದ ಒಂದು ತಿಂಗಳಿನಿಂದ ವಿಜಯ ಕರ್ನಾಟಕ ದಿನ ಪತ್ರಿಕೆ , ಅರಣ್ಯ ಇಲಾಖೆ , ಫ್ಯಾಸ್ ಪೌಂಡೇಶನ್ , ಇವುಗಳ ಸಂಯುಕ್ತಾಶ್ರಯದಲ್ಲಿ ನಡೆಯುವ ಹಸಿರು ಬೆಳಗಾವಿಗಾಗಿ ಒಂದು ದಿನ
ಸಸಿ ನಡುವ ಕಾರ್ಯಕ್ರಮದ ಪ್ರಯುಕ್ತ ಗೋಕಾಕಿನ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ಇಂದು ಮಧ್ಯಾಹ್ನ ಕರವೇ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಯಿಸಿದರು

ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹಸಿರು ಬೆಳಗಾವಿಗಾಗಿ ಒಂದು ದಿನ ನಿಜಕ್ಕೂ ಇಂದಿನ ದಿನಮಾನಕ್ಕೆ ಅತ್ಯಂತ ಅವಶ್ಯಕ ಮತ್ತು ಕಳಕಳಿಯ ವಿಷಯ ಹಿಂತಹ ಸಾಮಾಜಿಕ ಕಳಕಳಿಗೆ ಅಭಿಯಾನದ ರೂಪ ನೀಡಿರುವ ವಿಜಯ ಕರ್ನಾಟಕ ದಿನ ಪತ್ರಿಕೆ , ಫ್ಯಾಸ್ ಪೌಂಡೇಶನ್ , ಅರಣ್ಯ ಇಲಾಖೆ , ಮಹಾನಗರ ಪಾಲಿಕೆಯ ನಡೆ ಅನುಕರಣೀಯ ಈ ಅಭಿಯಾನ ಬೆಳಗಾವಿಗೆ ಮಾತ್ರ ಸೀಮಿತ ವಾಗಬಾರದೆಂಬ ಮಹತ್ತರ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದಿಂದ ಗೋಕಾಕ ನಗರದಲ್ಲಿ ಈ ಕಾರ್ಯಕ್ರಮದ ಪ್ರಯುಕ್ತ ನೂರು ಸಸಿಗಳನ್ನು ಹಚ್ಚುವ ಉದ್ದೇಶ ಹೊಂದಲಾಗಿದೆ

ನಾಳೇ ನಗರದ ಹೋರ ವಲಯದ ರಿಲಾಯನ್ಸ ಪೆಟ್ರೋಲ್ ಬಂಕ್ ಎದುರಿಗೆ ನಡೆಯುವ ಹಸಿರು ಬೆಳಗಾವಿಗಾಗಿ ಒಂದು ನಿಮಿತ್ಯ ಕಾರ್ಯಕ್ರಮಕ್ಕೆ ಶೂನ್ಯ ಸಂಪಾದನಾ ಮಠದ ಪರಮಪೂಜ್ಯ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಚಾಲನೆ ನೀಡುವರು ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಗೋಕಾಕ , ನಗರಸಭೆ ಗೋಕಾಕ , ಶಿಕ್ಷಣ ಇಲಾಖೆ ಗೋಕಾಕ ರವರ ಸಹಕಾರದಲಿ ಈ ಕಾರ್ಯಕ್ರಮ ನಡೆಯಲಿದೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಅಭಿಯಾನವನ್ನು ಯಶಸ್ವಿ ಗೋಳಿಸಬೇಕೆಂದು ಬಸವರಾಜ ಖಾನಪ್ಪನವರ ವಿನಂತಿಸಿದ್ದಾರೆ

ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ , ನಾರಾಯಣ ವಾಗುಲೆ , ರಾಜು ಕೆಂಚನಗುಡ್ಡ , ದುಂಡಯ್ಯ ಹುಕ್ಕೇರಿಮಠ , ಪ್ರತಿಕ ಪಾಟೀಲ ,ಬಸವರಾಜ ತಿಗಡಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ದಯಾನಂದ ವಾಗಲೆ ನಿರೂಪಿಸಿ ವಂದಿಸಿದರು. ಪೂರ್ವಭಾವಿ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಉಧ್ಘಾಟಿಸಲಾಯಿತ್ತು

Related posts: