RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕಳೆದ ಇಪ್ಪತ್ತೈದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೆವೆ : ಸಚಿವ ಸತೀಶ

ಗೋಕಾಕ:ಕಳೆದ ಇಪ್ಪತ್ತೈದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೆವೆ : ಸಚಿವ ಸತೀಶ 

ಕಳೆದ ಇಪ್ಪತ್ತೈದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೆವೆ : ಸಚಿವ ಸತೀಶ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 17 :

 

 

ಕಳೆದ ಇಪ್ಪತ್ತೈದು ವರ್ಷಗಳಿಂದ ಗೋಕಾಕ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೆವೆ. ಗೋಕಾಕ ವಿಧಾನಸಭಾ ಮತಕ್ಷೇತ್ರ ಕಾಂಗ್ರೇಸ್ ಪಕ್ಷದ ಭದ್ರ ಕೋಟೆಯಾಗಿದ್ದು ಲೋಕಸಭಾ ಅಭ್ಯರ್ಥಿ ಸಾಧುನವರ ಅವರಿಗೆ ಈ ಬಾರಿ ಅತ್ಯಧಿಕ ಮತವನ್ನು ನೀಡುವ ಮೂಲಕ ಜಯಶಾಲಿಯನ್ನಾಗಿ ಮಾಡಬೇಕೆಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು, ತಾಲೂಕಿನ ಖನಗಾಂವ, ಅಕ್ಕತಂಗೇರಹಾಳ, ಮದವಾಲ, ಕೊಳವಿ, ಹುಲಿಕಟ್ಟಿ, ಬೆಣಚಿನಮರಡಿ, ಮಾಲದಿನ್ನಿ, ಉಪ್ಪಾರಹಟ್ಟಿ, ಮಮದಾಪೂರ ಗ್ರಾಮಗಳಲ್ಲಿ ಸಹೋದರ ಲಖನ್ ಜಾರಕಿಹೊಳಿ ಜೊತೆಗೆ ಜಂಟಿಯಾಗಿ ಲೋಕಸಭಾ ಅಭ್ಯರ್ಥಿ ಸಾಧುನವರ ಅವರ ಪರ ಮತಯಾಚನೆ ಮಾಡಿ ಮಾತನಾಡಿದರು.
ಕಾಂಗ್ರೇಸ್ ಕಾರ್ಯಕರ್ತರು ಅವರಿವರ ಮಾತಿಗೆ ಕಿವಿಗೊಡದೆ ಕಳೆದ ಸಿದ್ಧರಾಮಯ್ಯ ನೇತ್ರತ್ವದ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ ನೇತ್ರತ್ವದ ಕಾಂಗ್ರೇಸ ಪಕ್ಷದ ಸಾಧನೆಗಳನ್ನು ಮತದಾರರಿಗೆ ತಿಳಿಸುವ ಕಾಯಕದಲ್ಲಿ ತೋಡಗಿಸಿಕೊಳ್ಳಬೇಕೆಂದರು.
ಕಾಂಗ್ರೇಸ್ ಪಕ್ಷ ದೀನ ದಲಿತರ, ಹಿಂದುಳಿದ ವರ್ಗಗಳ ಹಾಗೂ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೇಸ್ ಸ್ಪಷ್ಟ ಬಹುಮತದೊಂದಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಕಾಂಗ್ರೇಸ್ ಪಕ್ಷದ ಪ್ರಚಾರದ ಉಸ್ತುವಾರಿಯನ್ನು ಲಖನ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು ತಮ್ಮ ಸಮಸ್ಯೆಗಳೇನೆ ಇದ್ದರು ಸಹೋದರ ಲಖನ್ ಜಾರಕಿಹೊಳಿ ಅವರು ಬಗೆಹರಿಸುವದಾಗಿ ತಿಳಿಸಿದ ಅವರು ಕಾಂಗ್ರೇಸ್ ಅಭ್ಯರ್ಥಿ ಡಾ. ವ್ಹಿ ಎಸ್ ಸಾಧುನವರ ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು.
ಕಾಂಗ್ರೇಸ್ ಯುವ ಮುಖಂಡ ಲಖನ್ ಜಾರಕಿಹೊಳಿ ಮಾತನಾಡಿ, ಕಾಂಗ್ರೇಸ್ ಪಕ್ಷದಿಂದ ಸ್ಫರ್ಧಿಸಿರುವ ಅಭ್ಯರ್ಥಿ ಸಾಧುನವರ ಶಿಕ್ಷಣ, ಆರೋಗ್ಯ, ಸಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕಾಂಗ್ರೇಸ್ ಪಕ್ಷದ ಎಲ್ಲ ಕಾರ್ಯಕರ್ತರು ಸಾಧುನವರ ಅವರ ಕೈಬಲ ಪಡಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೇಸ್ ನೇತ್ರತ್ವದ ಸರಕಾರವನ್ನು ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಶಂಕರ ಗಿಡ್ಡನವರ, ಶಂಕರ ಹುರಕಡ್ಲಿ, ಬಸಲಿಂಗಪ್ಪ ಬೆನಕನ್ನವರ, ಅಶೋಕ ಸವಸುದ್ದಿ, ಅಪ್ಪಯ್ಯಪ್ಪ ದಂಡಿನ, ಆರ್ ಆರ್ ಜಾಯಿ, ಎನ್ ಬಿ ಮಾಳಗಿ, ಎಸ್ ಬಿ ವಿಭೂತಿಮಠ, ಅಪ್ಪಯ್ಯಪ್ಪ ಅಕ್ಕಿ, ಸಿ ಆರ್ ಕಾರಗಿ, ಉಳವಯ್ಯ ವಿಭೂತಿಮಠ, ಪಾಂಡು ಮನ್ನಿಕೇರಿ, ಬಸವರಾಜ ಸಾಯನ್ನವರ, ಸದಾನಂದ ಕಲಾಲ ಸೇರಿದಂತೆ ಇತರರು ಇದ್ದರು.

Related posts: