RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಗೋಕಾಕ:ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ 

ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಗೋಕಾಕ ಜು 8: ವಿಜಯ ಕರ್ನಾಟಕ ಪತ್ರಿಕೆ ಹಸಿರು ಬೆಳಗಾವಿಗಾಗಿ ಒಂದು ದಿನ ಅಭಿಯಾನಕ್ಕೆ ಕೈ ಜೋಡಿಸಿ ಇಂದು ಸಾಂಕೇತಿಕವಾಗಿ ನೂರು ಗಿಡಗಳನ್ನು ಹಚ್ಚಲಾಗಿದೆ ಮುಂದಿನ ತಿಂಗಳು ವಿಕೆ ಪತ್ರಿಕೆ ಮತ್ತು ಸ್ಥಳೀಯ ಎಲ್ಲ ಇಲಾಖೆಗಳ ಸಹಾಯ ಸಹಕಾರ ಹಾಗೂ ಎಲ್ಲ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮುರಘರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ ನಡೆಯಿಸಿ ಒಂದೇ ದಿನ ಸುಮಾರು 25 ಸಾವಿರ ಗಿಡಗಳನ್ನು ಹಚ್ಚುವ ಕಾರ್ಯಕ್ರಮ ಹಮ್ಮಿಕೋಳಲಾಗುವುದು ಎಲ್ಲರು ಈ ಅಭಿಯಾನವನ್ನು ಯಶ್ವಸಿಗೋಳಿಸಿದಂತೆ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮವನ್ನು ಸಹ ಯಶ್ವಸಿ ಗೋಳಿಸಬೇಕೆಂದು ಮನವಿ ಮಾಡಿದರು

ಹಸಿರು ಬೆಳಗಾವಿಗಾಗಿ ಒಃದು ದಿನ ಕಾರ್ಯಕ್ರಮದಲ್ಲಿ ಸಸಿ ಹಚ್ಚುತ್ತಿರುವ ಗಣ್ಯರು

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮ.ನಿ.ಪ್ರ ಮುರಘರಾಜೇಂದ್ರ ಮಹಾಸ್ವಾಮಿಗಳು ಮನಕುಲ ಉಳಿವಿಗಾಗಿ ಇಂದು ಪರಿಸರ ಸಂರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ ಕಳೆದ ಹಲವು ವರ್ಷಗಳಿಂದ ನಾಡಿನಲ್ಲಿ ನಸಿಸುತ್ತಿರುವ ಅರಣ್ಯ ಸಂಪತ್ತಿನಿಂದ ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲಾ ಇದರಿಂದ ನಾಡಿನ ಭಾಗಶಃ ಪ್ರದೇಶಗಳು ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿವೆ ಪ್ರತಿಯೋಬ್ಬರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ಮುಂದಾಗಿ ತಮ್ಮ ಸುತ್ತಮುತ್ತ ಗಿಡ ಮರಗಳನ್ನು ಉಳಿಸಿ ಬೆಳಿಸಿ ಬೇಕಾಗಿದೆ ಹಿಂತಹ ಕಳಕಳಿಯನ್ನು ಹೊತ್ತು ವಿಕೆ ಪತ್ರಿಕೆ ಬಳಗ ಬೆಳಗಾವಿಯಲ್ಲಿ ಒಂದೇ ದಿನ 40 ಸಾವಿರ ಗಿಡ ಹಚ್ಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಹೇಳಿದರು

ವಿಕೆ ಪತ್ರಿಕೆ ವರದಿಗಾರ ದಿಲೀಪ್ ಮಜಲೀಕರ ಅವರಿಗೆ ಸತ್ಕರಿಸುತ್ತಿರುವ ಕರವೇ ಅಧ್ಯಕ್ಷ ಖಾನಪ್ಪನವರ

ಕಾರ್ಯಕ್ರಮದಲ್ಲಿ ವೇದಿಯ ಕಾರ್ಯದರ್ಶಿ ಸಾಧಿಕ ಹಲ್ಯಾಳ , ನಗರಾದಧ್ಯಕ್ಷ ತಳದಪ್ಪ ಅಮ್ಮಣಗಿ , ವಲಯ ಅರಣ್ಯಾಧಿಕಾರಿ ಎಂ.ಕೆ. ಪಾತ್ರೋಟ , ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ .ಬಳಗಾರ , ಆರೋಗ್ಯ ಇಲಾಖೆಯ ವೈದ್ಯರಾದ ಕೋಣಿ ,ವಾಗಮೋಡೆ , ಅಂಗಡಿ ಹೆಸ್ಕಾಂನ ಬಾಗಡೇ , ನಾಗನ್ನವರ ನಗರಸಭೆ ಅಧಿಕಾರಿಗಳಾದ ಎಂ.ಎಚ್.ಅತ್ತಾರ , ಕೋಳಿ , ನಿವೃತ್ತ ಉಪ ವಲಯ ಸಂರಕ್ಷಣಾಧಿಕಾರಿ ಎಸ್.ಸಿ.ಪಾಟೀಲ್ , ನಗರಸಭೆ ಸದಸ್ಯರಾದ ಪರಶುರಾಮ ಭಗತ್ , ಭೀಮಶಿ ಭರಮಣ್ಣವರ , ಆನಂದ ಗೋಟಡಕ್ಕಿ , ವೇದಿಕೆಯ ಪದಾಧಿಕಾರಿಗಳಾದ ಹನಿಫಸಾಬ ಸನದಿ, ಕೆಂಪ್ಪಣಾ ಕಡಕೋಳ , ಮಹಾದೇವ ಮಕ್ಕಳಗೇರಿ , ರಮೆಶ ಕಮತಿ , ರಹೆಮಾನ ಮೋಕಾಶಿ , ಅಬ್ಬಾಸ ದೇಸಾಯಿ , ಜುಬೇರ ಮಿರ್ಜಾಬಾಯಿ , ಕೃಷ್ಣಾ ಖಾನಪ್ಪನವರ , ಮಂಜು ಪ್ರಭುನಟ್ಟಿ , ಅರಣ್ಯ ರಕ್ಷಕ ಸತೀಶ ಮುಂಗರವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಅರಣ್ಯಾಧಿಕಾರಿ ಎಚ್‌.ಜಿ ಇಂಗಳೇ ನಿರೂಪಿಸಿ ವಂದಿಸಿದರು .

Related posts: