RNI NO. KARKAN/2006/27779|Saturday, October 19, 2024
You are here: Home » breaking news » ಕೌಜಲಗಿ:ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ “ಕನ್ನಡದೀಪ” ಪ್ರಶಸ್ತಿ ಪ್ರದಾನ

ಕೌಜಲಗಿ:ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ “ಕನ್ನಡದೀಪ” ಪ್ರಶಸ್ತಿ ಪ್ರದಾನ 

ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ “ಕನ್ನಡದೀಪ” ಪ್ರಶಸ್ತಿ ಪ್ರದಾನ

 

 

ನಮ್ಮ ಬೆಳಗಾವಿ ಸುದ್ದಿ , ಕೌಜಲಗಿ ಏ 22 :

 

ಸಮೀಪದ ಭಾಗೋಜಿಕೊಪ್ಪದ ಶ್ರೀ ಶಿವಯೋಗೀಶ್ವರ ಹಿರೇಮಠದ ಜಾತ್ರೆ ಹಾಗೂ ಗುರುಲಿಂಗ ಸ್ವಾಮಿಗಳ ಪುಣ್ಯಾರಾಧನೆಯು ಶನಿವಾರ ಭಕ್ತಿ-ಶ್ರದ್ಧೆ ಸಡಗರದಿಂದ ಸಮಾರೋಪಗೊಂಡಿತು.
ಸೋಮವಾರ ಎ-15 ರಿಂದ ಜರುಗಿದ ಜಾತ್ರೆಯಲ್ಲಿ ವಿವಿಧ ವಿಷಯಗಳ ಮೇಲೆ ನಾಡಿನ ಮಠಾಧೀಶರುಗಳು ಆಧ್ಯಾತ್ಮಿಕ ಪ್ರವಚನಗಳನ್ನು ನೀಡಿದರು. ರಾತ್ರಿ 10 ಗಂಟೆಯ ನಂತರ ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ಜಾತ್ರೆಯ ಸಮಾರೋಪ ಶನಿವಾರ ಜರುಗಿತು. ಅಂದು ಬೆಳಿಗ್ಗೆ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಅಯ್ಯಾಚಾರ, ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಸಂಜೆ: 6:30 ಕ್ಕೆ ಬಾಗೋಜಿಕೊಪ್ಪದಲ್ಲಿ ಜನಿಸಿದ ನಾಡಿನ ಶ್ರೇಷ್ಠ ಸಾಹಿತಿ ಡಿ.ಎಸ್.ಕರ್ಕಿ ಅವರ ನೆನಪಿಗಾಗಿ ಶ್ರೀ ಮಠವು ಪ್ರತಿವರ್ಷವೂ ಕನ್ನಡ ದೀಪ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. 2018-19ನೇ ಸಾಲಿನ ಕನ್ನಡ ದೀಪ ಪ್ರಶಸ್ತಿಯನ್ನು ಈ ಬಾರಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಬಾಗೋಜಿಕೊಪ್ಪದ ನೆಲವು ಪುಣ್ಯತಮದಿಂದ ಕೂಡಿದ್ದಾಗಿದೆ. ಈ ಮಣ್ಣಿಗೆ ಒಂದು ದಿವ್ಯ ಶಕ್ತಿಯಿದೆ. ಈ ನೆಲದಲ್ಲಿ ಸಾಹಿತ್ಯ ದಿಗ್ಗಜ ಡಿ.ಎಸ್.ಕರ್ಕಿ, ಸಿ.ಕೆ. ಬಾಗೋಜಿ, ಅಥಣಿ ಶಿವಯೋಗಿಗಳು, ನಾಗನೂರ ಡಾ. ಶಿವಬಸವ ಮಹಾಸ್ವಾಮಿಗಳು ಹಾಗೂ ರಾಜಕಾರಣಿ ಎ.ಎಲ್. ಪಂಚಗಾಂವಿ ಮುಂತಾದ ಮಹನೀಯರನ್ನು ನಾಡಿಗೆ ನೀಡಿದ ಕೊಡುಗೆ ಭಾಗೋಜಿಕೊಪ್ಪ ಗ್ರಾಮಕ್ಕೆ ಸಲ್ಲುತ್ತದೆ. ಇಂತಹ ಪುಣ್ಯದ ದೀಪ ಕನ್ನಡ ದೀಪ ನನಗೆ ದೊರೆತಿರುವುದು ನನ್ನ ಭಾಗ್ಯವೆಂದು ಭಾವಿಸುತ್ತೇನೆ ಎಂದು ಅಭಿಮಾನಪೂರ್ವಕವಾಗಿ ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾಗೋಜಿಕೊಪ್ಪ ಶಿವಯೋಗೀಶ್ವರ ಹಿರೇಮಠದ ಪೀಠಾಧ್ಯಕ್ಷ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ದಿವ್ಯ ಸಾನಿಧ್ಯವನ್ನು ವೀರಭದ್ರ ಶಿವಯೋಗಿ ಶಿವಾಚಾರ್ಯರು ವಹಸಿ, ಅಥಣಿಯ ಶಿವಯೋಗಿಗಳು ಕನ್ನಡ ನಾಡು ಕಂಡ ಒರ್ವ ಸರ್ವಶ್ರೇಷ್ಠ ಸಂತರು, ಪವಾಡ ಪುರುಷರು, ಬಡವರ ಕಾಮಧೇನು ಆಗಿದ್ದರು. ಅವರ ಜೀವನ ಆದರ್ಶ ತತ್ವಗಳನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಪುನೀತಗೊಳಿಸಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು.
ಸಮಾರಂಭದ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಾಗಿನಿ ದಾರಾವಹಿಯ ನಟಿ ದೀಪಿಕಾ ಅವರನ್ನು ಶ್ರೀಮಠದವತಿಯಿಂದ ಸತ್ಕರಿಸಲಾಯಿತು.
ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಬಿಸಗುಪ್ಪಿ ರೇಣುಕಾ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಚಿಪ್ಪಲಕಟ್ಟಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಗೋಕಾಕ ಕಪರಟ್ಟಿಯ ಬಸವರಾಜ ಹಿರೇಮಠ, ನಾಗನೂರಿನ ಮಾತೋಶ್ರೀ ಕಾವ್ಯ ಅಮ್ಮನವರು, ಹೊಸೂರಿನ ಅನ್ನಪೂರ್ಣ ಮಾತೋಶ್ರೀಯವರು, ಊರಿನ ಮುಖಂಡರುಗಳಾದ ಉಮೇಶ ಕೊಳವಿ, ಮಹಾದೇವಗೌಡ ಪಾಟೀಲ, ಮಲ್ಲಿಕಾರ್ಜುನ ಗಾಣಗಿ, ರಂಗಪ್ಪ ಕರಿಗಣ್ಣವರ, ಅಶೋಕ ಕಪ್ಪತ್ತಿ, ಎಸ್.ಬಿ.ಕರ್ಕಿ, ಶಿವಾನಂದ ಮೆಣಸಿ, ಎಸ್.ಆರ್.ತೋಟಗಿ, ಸಿ.ಆರ್.ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು

Related posts: