RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕುಟುಂಬದ ಸಮಸ್ಯೆ ಬಗೆಹರಿಸಲು ಕಾಲ ಮೀರಿ ಹೋಗಿದೆ : ಮತದಾನ ಮಾಡಿದ ಸಚಿವ ಸತೀಶ ಪ್ರತಿಕ್ರಿಯೆ

ಗೋಕಾಕ:ಕುಟುಂಬದ ಸಮಸ್ಯೆ ಬಗೆಹರಿಸಲು ಕಾಲ ಮೀರಿ ಹೋಗಿದೆ : ಮತದಾನ ಮಾಡಿದ ಸಚಿವ ಸತೀಶ ಪ್ರತಿಕ್ರಿಯೆ 

ನಗರದ ಜಿಆರ್‍ಬಿಸಿ ಕಾಲೋನಿಯ 161 ಮತಗಟ್ಟೆಯಲ್ಲಿ ಅರಣ್ಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ ಚಲಾಯಿಸಿದರು.

ಕುಟುಂಬದ ಸಮಸ್ಯೆ ಬಗೆಹರಿಸಲು ಕಾಲ ಮೀರಿ ಹೋಗಿದೆ : ಮತದಾನ ಮಾಡಿದ ಸಚಿವ ಸತೀಶ ಪ್ರತಿಕ್ರೀಯೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 23 :

 

ನಮ್ಮ ಕುಟುಂಬದ ಸಮಸ್ಯೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗೊತ್ತಿದ್ದು ಸಮಸ್ಯೆ ಪ್ರಾರಂಭಿಕ ಹಂತದಲ್ಲಿಯೇ ಸ್ಪಂದಿಸಬೇಕಾಗಿತ್ತು ಈಗ ಕಾಲ ಮೀರಿ ಹೋಗಿದೆ ಎಂದು ಅರಣ್ಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ಸಂಜೆ ನಗರದ ಜಿಆರ್‍ಬಿಸಿ ಕಾಲೋನಿಯ 161 ಮತಗಟ್ಟೆಯಲ್ಲಿ ಮತ ಚಲಾಯಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಹೋರಾಟ ಪಕ್ಷಕ್ಕಾಗಿ ನಡೆದಿದ್ದು ವ್ಯಯಕ್ತಿಕವಾಗಿ ಅಲ್ಲ, ಮಗುವನ್ನು ಆಟವಾಡಿಸಲು ಬಂದ ಅಂಬಿರಾವ ಪಾಟೀಲ ಇಂದು ಎಲ್ಲರನ್ನು ಆಟವಾಡಿಸುತ್ತಿದ್ದಾನೆ ಎಂದು ಖಾರವಾಗಿ ಪ್ರತಿಕ್ರೀಯಿಸಿದರು.
ಕಂದಾಯ ಇಲಾಖೆ, ನಗರಸಭೆ, ರಿದ್ದಿ-ಸಿದ್ದಿ ಹಾಗೂ ಪಾಲ್ಸ್ ಮಿಲ್ಲ್, ಬಿನ್‍ಶೆತ್ಕಿ, ಮರಳು ಸಾಗಾಣಿಕೆಯ ಪರವಾಣಿಗೆ ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೂ ಅಂಬಿರಾವ ಪಾಟೀಲ ಅವರ ಅನುಮತಿಬೇಕು. ಶಾಸಕ ರಮೇಶ ಅವರು 20 ವರ್ಷಗಳಿಂದ ಕೆಡಿಪಿ ಸಭೆನೆ ನಡೆಸಿಲ್ಲ, ಅಂಬಿರಾವ ಅವರ ನಡೆಯಿಂದಾಗಿ ಇಡಿ ಗೋಕಾಕ ಮತಕ್ಷೇತ್ರದ ಜನತೆ ರೋಷಿ ಹೋಗಿದ್ದಾರೆ. ಇದು ಹೀಗೆ ಮುಂದುವರೆದರೇ ನಾವು ಜಾರಕಿಹೊಳಿ ಎನ್ನುವ ಸರ್‍ನೇಮ್ ಬದಲಿಸಿ ಪಾಟೀಲ ಅಂತ ಮಾಡಿಕೊಳ್ಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಈ ಸತ್ಯ 20 ವರ್ಷಗಳ ನಂತರವಾದರೂ ಸಹೋದರ ಲಖನ ಜಾರಕಿಹೊಳಿ ಅವರಿಗೆ ಅರಿವಾಗಿದ್ದು ನಮ್ಮ ಹೋರಾಟದಲ್ಲಿ ಕೈ ಜೋಡಿಸಿದ್ದು, ನನಗೆ ಗೋಕಾಕ ಮತಕ್ಷೇತ್ರದಲ್ಲಿ ಹೆಚ್ಚಿನ ಶಕ್ತಿ ಬಂದಿದ್ದು, ಹಿಂದುಳಿದ ಗೋಕಾಕ ಮತಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಸಹೋದರ ಲಖನ ಅವರೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.
ರಮೇಶ ಜಾರಕಿಹೊಳಿ ಅವರ ಮನವೊಲಿಸಲು ರಾಹುಲ ಗಾಂಧಿ ಅಷ್ಟೆಯಲ್ಲದೇ ಸಿದ್ದರಾಮಯ್ಯ, ಪರಮೇಶ್ವರ, ವೇಣು ಗೋಪಾಲ ಸೇರಿದಂತೆ ಕಾಂಗ್ರೆಸ್‍ನ ಎಲ್ಲ ನಾಯಕರು ರಮೇಶ ಜಾರಕಿಹೊಳಿ ಅವರ ಮುಂದೆ ಮಡ್ಡಿಯೊರಿದ್ದರು ಅವರು ಕ್ಯಾರೇ ಅನ್ನಲಿಲ್ಲ, ಪತ್ರ, ಪೋನ್‍ನಲ್ಲಿ ಖುದ್ದು ಹುಡುಕಿ ಹುಡಕಿ ಸಾಕಾಗಿ ಹೋಗಿದ್ದು ರಮೇಶ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಇನ್ನೇನು ಉಳಿದಿಲ್ಲ, ರಮೇಶ ಅವರು ಪಕ್ಷ ಬೀಡುವರಾದರೆ ಬಿಡಲಿ, ನಿರ್ಧಾರ ಯಾವುದೇಯಾಗಿದ್ದರು ಬೇಗನೆ ತೆಗದುಕೊಳ್ಳಲಿ ಎಂದು ಸಚಿವರು ಹೇಳಿದರು.

Related posts: