RNI NO. KARKAN/2006/27779|Monday, December 23, 2024
You are here: Home » breaking news » ಬೆಳಗಾವಿ:ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ

ಬೆಳಗಾವಿ:ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ 

ಹಸಿರು ಬೆಳಗಾವಿಗಾಗಿ ಒಂದು ದಿನ : ಸಸಿ ಹಚ್ಚಲು ಹರಿದು ಬಂದ ಜನಸಾಗರ

ಬೆಳಗಾವಿ 9: ವಿಜಯ ಕರ್ನಾಟಕ ಪತ್ರಿಕೆ , ಪ್ಯಾಸ್ ಪೌಂಡೇಶನ , ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ, ಸಂಘ ಸಂಸ್ಥೆಗಳು, ಕನ್ನಡ ದಿನಪತ್ರಿಕೆಗಳು, ನಗರದ ರಾಜಕೀಯ ಗಣ್ಯರು, ಸೇರಿದಂತೆ ಎಲ್ಲರೂ ಒಗ್ಗೂಡಿ ಇಂದು ‘ಹಸಿರು ಬೆಳಗಾವಿಗಾಗಿ ಒಂದು ದಿನ ಕಾರ್ಯಕ್ರಮದಲ್ಲಿ 40 ಸಾವಿರ ಸಸಿ ನೆಟ್ಟು ಅದ್ಧೂರಿ ಹಾಗೂ ಅಪರೂಪದ ಕ್ಸಣಗಳಿಗೆ ಸಾಕ್ಷೀಯಗಿ ಹೊಸ ಇತಿಹಾಸ ಬರೆಯಿತು

ಹಸಿರು ಬೆಳಗಾವಿಗೆ ಕೈ ಜೋಡಿಸಿದ ಬೆಳಗಾವಿ ಪೊಲೀಸರು

ಮೊದಲ ಬಾರಿಗೆ ಎನ್ನುವಂತೆ ಪೊಲೀಸ್ ಇಲಾಖೆಯವರು ಭಾಗವಹಿಸಿ ಗಮನ ಸೆಳೆದರು ಪೊಲೀಸ್ ಆಯುಕ್ತರ ಕಛೇರಿ ಆವರಣದಲ್ಲಿ ಡಿಸಿಪಿ ಸೀಮಾ ಲಾಟಕರ ಹಾಗೂ ಕ್ರೈಂ ಡಿಸಿಪಿ ಅಮರನಾಥರೆಡ್ಡಿ ಇತರ ಸಹೊದ್ಯೋಗಿ ಅಧಿಕಾರಿಗಳೊಂದಿಗೆ ಸಸಿ ನೆಟ್ಟು ನೀರೆರೆದರೆ.ಅತ್ತ ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಸಿಬ್ಬಂಧಿ ತಮ್ಮ ಠಾಣಾಧಿಕಾರಿ ನೇತೃತ್ವದಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು

ನಗರ ಸಂಚಾರ ವಿಭಾಗಗಳಾದ ದಕ್ಷಿಣ ಮತ್ತು ಉತ್ತರ ಠಾಣೆಗಳ ಸಿಬ್ಬಂಧಿ ಎಸಿಪಿ ಶಂಕರ ಮಾರಿಹಾಳ, ಇನ್ಸಪೆಕ್ಟರಗಳಾದ ಜಾವೇದ ಮುಶಾಪುರಿ ಪ್ರಭಾಕರ ಧರ್ಮಟ್ಟಿ ನೇತೃತ್ವದಲ್ಲಿ ಶಿಸ್ತಿನ ಬಿಳಿ ಸಮವಸ್ತ್ರದಲ್ಲಿ ಸಸಿಕರಣ ನೆರವೇರಿಸಿ ನಾನಗರಿಕರ ಗಮನ ಸೆಳೆದರು . ದಿನಪತ್ರಿಕೆಗಳ ಹಸಿರು ಅಭಿಯಾನದಡಿ ವಿಜಯ ಕರ್ನಾಟಕ ಹಾಗೂ ಕನ್ನಡಮ್ಮ ದಿನಪತ್ರಿಕೆಗಳು ಅರಣ್ಯ ಇಲಾಖೆ, ಸೇಟ್ರೀ ಸ್ವಯಂ ಸೇವಾ ಸಂಸ್ಥೆ ಸೇರಿದಂತೆ 74 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಆಯಾಕಟ್ಟಿನ ಜಾಗಗಳಲ್ಲಿ ಗಿಡ ನೆಟ್ಟು ಪರಿಸರ ಅರಿವು, ಉಳಿವಿನ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ, ಎಂಎಲ್ ಸಿ ಮಹಾಂತೇಷ ಕವಟಗಿಮಠ, ಮೇಯರ್ ಸಂಜೋತಾ ಬಾಂದೇಕರ, ಕಮಿಷ್ನರ್ ಶಶಿಧರ ಕುರೇರ, ಡಿಸಿಎಫ್ ಬಿ. ವಿ. ಪಾಟೀಲ ಸೇರಿದಂತೆ ಇತರ ಗಣ್ಯರು ಇಂದಿನ ಹಸಿರು ಬೆಳಗಾವಿಗಾಗಿ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಗರದ ಎಲ್ಲ ವಸತಿ ಬಡಾವಣೆಗಳು, ಉದ್ಯಾನಗಳು, ಖಾಲಿ ಜಾಗೆಗಳಲ್ಲಿ ಸಸಿ ನಡಲಾಯಿತ್ತು.

ಈ ಅಭಿಯಾನಕ್ಕೆ ಗೋಕಾಕ , ರಾಮದುರ್ಗ, ಬೈಲಹೊಂಗಲ ತಾಲೂಕಿನ ಬೆಂಡವಾಡ ಸೇರಿದಂತೆ ಜಿಲ್ಲೆಯ ಇತರ ಕಡೆಗಳಲ್ಲಿ ಜನ ಕೈ ಜೋಡಿಸಿದ್ದು ಗಮನಾರ್ಹವಾಗಿತ್ತು

Related posts: