RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶಾಂತಿಯುತವಾಗಿ ನಡೆದ ಚುನಾವಣೆ : ಗೋಕಾಕ ಮತಕ್ರೇತ್ರದಲ್ಲಿ 65.90 ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ 67.70 ಮತದಾನ

ಗೋಕಾಕ:ಶಾಂತಿಯುತವಾಗಿ ನಡೆದ ಚುನಾವಣೆ : ಗೋಕಾಕ ಮತಕ್ರೇತ್ರದಲ್ಲಿ 65.90 ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ 67.70 ಮತದಾನ 

ಶಾಂತಿಯುತವಾಗಿ ನಡೆದ ಚುನಾವಣೆ : ಗೋಕಾಕ ಮತಕ್ರೇತ್ರದಲ್ಲಿ 65.90 ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ 67.70 ಮತದಾನ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 23 :

 
ಲೋಕಸಭೆ ಚುನಾವಣೆಯ ರಾಜ್ಯದಲ್ಲಿಯ ಎರಡನೇ ಹಂತದ ಮತದಾನದ ದಿನದಂದು. ಇಂದು ಜನರಲ್ಲಿ ಮತದಾನದ ಬಗ್ಗೆ ಉತ್ಸಾಹವೇ ಕಂಡು ಬರಲಿಲ್ಲ. ಮುಂಜಾನೆಯಿಂದ ಮತದಾನ ಕುಂಠಿತವಾಗಿ ನಡೆಯಿತು. ಅಲ್ಲಲ್ಲಿ ಮತಯಂತ್ರಗಳಲ್ಲಿ ದೋಷಗಳು ಕಂಡು ಬಂದವು ಅಲ್ಲದೇ ಮತದಾರರ ಯಾದಿಯಲ್ಲಿ ಕೆಲವೊಂದು ಹೆಸರುಗಳು ಬಿಟ್ಟು ಹೋಗಿದ್ದರಿಂದ ಮತದಾರರು ಪರದಾಡಿದ್ದು ಕಂಡು ಬಂದಿತು. ಮತದಾರರನ್ನು ಒಲೈಸಲು ಯಾವುದೇ ಪಕ್ಷದ ಮುಖಂಡರು ಮತಗಟ್ಟೆಗಳ ಸುತ್ತಮುತ್ತ ಕಂಡು ಬರದೇ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯಿತು.
ಮಧ್ಯಾನ್ಹ ಸುಡು ಬಿಸಿಲಿನ ಜಳಕ್ಕೆ ಮತದಾನ ಕೇಂದ್ರಗಳು ಮತದಾರರಿಲ್ಲದೇ ಬೀಕೋ ಎನ್ನುತ್ತಿದ್ದವು. ಸಂಜೆ 4 ಗಂಟೆಯ ನಂತರ ಮತದಾನದ ಪ್ರಕ್ರೀಯೆಯಲ್ಲಿ ಚುರುಕುಗೊಂಡು ಸಂಜೆ 6 ಗಂಟೆಯೆ ವೇಳಗೆ ಗೋಕಾಕ ಮತಕ್ಷೇತ್ರದಲ್ಲಿ ಅಂದಾಜು 65.90 ರಷ್ಟು ಹಾಗೂ ಅರಭಾಂವಿ ಮತಕ್ಷೇತ್ರದಲ್ಲಿ 67.70 ಮತದಾನವಾಗಿದೆ.
ಇದೇ ಮೊದಲಬಾರಿಗೆ ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತದಾನ ಮಾಡಲು ಬಂದ ವಿಕಲಚೇತನರನ್ನು, ವಯೋವೃದ್ದರನ್ನು ಹಾಗೂ ಗರ್ಭಿಣಿಯರಿಗೆ ಸಹಾಯ ಮಾಡಿದ್ದು ಎಲ್ಲರ ಮೆಚ್ಚುಗೆಯನ್ನು ಗಳಿಸಿತು.
ನಗರದದಲ್ಲಿ ಮತಗಟ್ಟೆ ಸಂಖ್ಯೆ 116 ರಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದಿತು. ಆದಿಜಾಂಬವ ನಗರದಲ್ಲಿರುವ ಮತಗಟ್ಟೆ ನಂ. 119ರಲ್ಲಿ 245 ಜನ ಮತದಾರರು ಮತ ಚಲಾಯಿಸಿದ ನಂತರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತದಾನ ಒಂದು ಗಂಟೆಗೂ ಹೆಚ್ಚುಕಾಲ ಸ್ಥಗಿತಗೊಂಡಿತು. ತದನಂತರ ಬೇರೆ ಮತಯಂತ್ರ ತಂದು ಅಳವಡಿಸಿದಾಗ ಪುನಃ ಮತದಾನ ಪ್ರಾರಂಭವಾಯಿತು.
ಈ ಮತಗಟ್ಟೆಯಲ್ಲಿಯೇ ಹೆಸರು ಇದ್ದ ನಗರದ ಶೂನ್ಯ ಸಂಪಾದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತಯಂತ್ರ ಕೆಟ್ಟಿದ್ದರಿಂದ ಒಂದು ಗಂಟೆ ಮತಗಟ್ಟೆಯಲ್ಲಿಯೇ ಕುಳಿತು ಬೇರೆ ಮತಯಂತ್ರ ಅಳವಡಿಸಿದ ನಂತರ ಮತ ಚಲಾಯಿಸಿದರು.

Related posts: