RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ

ಬೆಳಗಾವಿ:ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ 

ಸತೀಶ್‌ ಜಾರಕಿಹೊಳಿ ಮೋಸ ಮಾಡಿ ಮಂತ್ರಿಯಾಗಿದ್ದಾರೆ : ಮಾಜಿ ಸಚಿವ ರಮೇಶ ಆರೋಪ

ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 24  : 

ಗೋಕಾಕ ಸಾಹುಕಾರರ ಟಾಕವಾರ ಮುಂದುವರೆದಿದೆ ನಿನ್ನೆಯಷ್ಟೇ ಮಾಧ್ಯಮಗಳ ಮುಂದೆ ಸಹೋದರ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಗುಡುಗಿದ್ದ ಸಚಿವ ಸತೀಶ್ ವಿರುದ್ಧ ಇಂದು ಶಾಸಕ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ

ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ , ಕಾಂಗ್ರೆಸ್‌ಗೆ ಗುಡ್‌ಬೈ ಹೇಳುವುದು ಖಚಿತಾಗಿದೆ.

ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಹೊರಟ ವೇಳೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ ಗೋಮುಖ ನೋಡಿ ಮೋಸ ಹೋಗಿದ್ದೇನೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಆರಂಭಿಸಿದ್ದೇ ಸತೀಶ್‌. ನಮ್ಮ ಮನೆಗೆ ಬಂದು ಅಳುತ್ತಾ ಕುಳಿತಿದ್ದ. ಬರೀ ಸಚಿವನಾದರೆ ನಮ್ಮ ಮನೆತನಕ್ಕೆ ಹಿನ್ನಡೆ ಎಂದಿದ್ದ. ದ್ರೋಹಿಗಳಿಂದ ಕಾಂಗ್ರೆಸ್‌ ಪಕ್ಷ ಹಾಳಾಗಿ ಹೋಗಿದೆ ಎಂದು ಕಿಡಿ ಕಾರಿದರು. ಈಗ ಮೋಸಮಾಡಿ ಸಚಿವನಾಗಿದ್ದಾನೆಂದು ಆರೋಪಿಸಿದರು .

ನಾನು ಉಪ ಚುನಾವಣೆಯಲ್ಲಿ ಮಾತ್ರ ಗೋಕಾಕ್‌ನಿಂದ ಸ್ಪರ್ಧಿಸುತ್ತೇನೆ. ಮುಂದಿನ ವಿಧಾನ ಸಭಾ ಚುನಾವಣೆ ಯಮಕನ ಮರಡಿಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸಹೋದರ, ಸಚಿವ ಸತೀಶ್‌ ಜಾರಕಿಹೊಳಿಗೆ ಶಾಕ್‌ ನೀಡಿದರು.

ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧವೂ ಆಕ್ರೋಶ ಹೊರ ಹಾಕಿದ ರಮೇಶ್‌ ಜಾರಕಿಹೊಳಿ, ಹೌದು ನಮ್ಮ ಸ್ಥಿತಿ ತೋಳ ಬಂತು ತೋಳ ರೀತಿ ಆಗಿದೆ. ಆಕೆಯ ಬಗ್ಗೆಎದುರು ಬದುರು ಕುಳಿತು ಮಾತನಾಡುವುದು ತುಂಬಾ ಇದೆ. ಆಕೆಯ ಕುಟುಂಬದ ಹಿನ್ನಲೆ ಏನು, ನಮ್ಮ ಕುಟುಂಬದ ಹಿನ್ನಲೆ ಏನು ಎಂದು ಹೇಳಬೇಕು ಎಂದರು.

 

ಬಿಜೆಪಿ ಮುಖಂಡ ಕಾರಜೋಳ ಜೊತೆ ಪ್ರಯಾಣ :

ರಮೇಶ್‌ ಜಾರಕಿಹೊಳಿ ಪ್ರಯಾಣಿಸುತ್ತಿರುವ ವಿಮಾನದಲ್ಲೇ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರೂ ಪ್ರಯಾಣಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

 

Related posts: