RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ

ಗೋಕಾಕ:ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ 

ದಿ. 29 ರಿಂದ 3 ದಿನಗಳವರೆಗೆ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಏ 25 :

 

ನಗರದ ಉಪ್ಪಾರ ಗಲ್ಲಿಯಲ್ಲಿರುವ ಶ್ರೀ ರೇಣುಕಾದೇವಿಯ ಜಾತ್ರಾ ಮಹೋತ್ಸವವು ದಿ. 29 ರಿಂದ ಮೇ 1 ರವರೆಗೆ 3 ದಿನಗಳವರೆಗೆ ಅತೀ ವಿಜೃಂಬನೆಯಿಂದ ಜರುಗಲಿದೆ.
ದಿ.29 ರಂದು ಸಾಯಂಕಾಲ 4 ಗಂಟೆಗೆ ನಗರದ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಮಂಗಳವಾದ್ಯದೊಂದಿಗೆ ಬರಮಾಡಿಕೊಳ್ಳುವುದು. ರಾತ್ರಿ 10.30ಕ್ಕೆ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ಶ್ರೀ ಬೀರಸಿದ್ದೇಶ್ವರ ಗಾಯನ ಸಂಘದ ಮುಖ್ಯ ಗಾಯಕರು ಕಾವೇರಿ ಹಾಗೂ ಸಂಘಡಿಗರಿಂದ (ಶ್ರೀ ಮಾಳಿಂಗೇಶ್ವರ ಮಾರ್ಗ) ಹಾಗೂ ಗೋಕಾಕದ ಮಲಕಾರಿ ಸಿದ್ದೇಶ್ವರ ಗಾಯನ ಸಂಘದ ಮುಖ್ಯ ಗಾಯಕರು ಸಿದ್ದು ಹಾಗೂ ಸಂಘಡಿಗರಿಂದ (ಶ್ರೀ ಅಮೋಘಸಿದ್ದೇಶ್ವರ ಮಾರ್ಗ) ಬೆಳಗಿನ ಜಾವದ ವರೆಗೆ ಡೊಳ್ಳಿನ ಪದಗಳು ಜರುಗುವುದು.
ದಿ.30 ರಂದು ಮುಂಜಾನೆ 6 ಗಂಟೆಗೆ ಶ್ರೀ ರೇಣುಕಾದೇವಿಗೆ ಅಭಿಷೇಕ ನಂತರ ಶ್ರೀ ರೇಣುಕಾದೇವಿಯ ಪಲ್ಲಕ್ಕಿಯೊಂದಿಗೆ ಸಕಲ ವಾದ್ಯಮೇಳ ಹಾಗೂ ಮುತ್ತೈದೆಯರ ಆರತಿ, ಅಂಬಲಿ ಕೊಡಗಳೊಂದಿಗೆ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀದೇವಿಯ ಗುಡಿಯನ್ನು ತಲುಪುವುದು. ಮಧ್ಯಾಹ್ನ 12ಕ್ಕೆ ಶ್ರೀ ದೇವಿಯ ಉಡಿ ತುಂಬುವ ಕಾರ್ಯಕ್ರಮ. ನಂತರ ಮಹಾಪ್ರಸಾದ ನಡೆಯಲಿದೆ. ಸಾಯಂಕಾಲ 5.30 ಗಂಟೆಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಶ್ರೀಫಲಗಳ ಲಿಲಾವು ನಡೆಯಲಿದ್ದು, ನಂತರ 10.30 ಗಂಟೆಗೆ ಕೃಷ್ಣಾ ದೊಡ್ಡನ್ನವರ ಅವರ ನಿರ್ದೇಶನದಲ್ಲಿ ರನ್ನ ಬೆಳಗಲಿಯ ಶ್ರೀ ಲಕ್ಷ್ಮೀ ದೇವಿ ನಾಟ್ಯ ಸಂಘ ಹಾಗೂ ಡೇವಿಡ್ ಸಂಗೀತ ಬಳಗದಿಂದ ಕರ್ಮದ ಕೂಸಿಗೆ ಧರ್ಮದ ತೊಟ್ಟಿಲು(ಸಾಕು ಮಗನ ಸವಾಲ) ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದು. ದಿ. ಮೇ 1 ರಂದು ಮುಂಜಾನೆ 7 ಗಂಟೆಗೆ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಮರಳಿ ಕಳಿಸುವುದು ಎಂದು ಜಾತ್ರಾ ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

.

Related posts:

ಘಟಪ್ರಭಾ:ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸ…

ಗೋಕಾಕ:ಬೋಗಸ್ ಚೆಕ್ ಪಡೆದರೆ ಹುಷಾರ್ : ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕ…

ಗೋಕಾಕ:ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಎಂಬ ಆರೋಪ : ಆಸ್ಪತ್ರೆಯಲ್ಲಿ ದಾಂಧಲೆ ಮಾಡಿ ವಸ್ತುಗಳನ್ನು ಒಡೆದು ಹಾಕಿದ ಪೋ…