ಬೆಳಗಾವಿ:ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಮದು ಪತ್ತಾರ ಪ್ರಕರಣ : ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಏ 29 :
ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಸಾವಿಗೆ ನ್ಯಾಯ ದೊರಕಿಸಿ , ಅತ್ಯಾಚಾರ ವೆಸಗಿದ ಅಪರಾಧಿಗಳಿಗೆ ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ಪ್ರತೀಭಟನೆ ನಡೆಯಿಸಿ ಜಿಲ್ಲಾಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು
ಸೋಮವಾರದಂದು ಮುಂಜಾನೆ ನಗರದ ಚನ್ನಮ್ಮಾ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿ , ಮಧು ಪತ್ತಾರ ಪ್ರಕರಣ ಸಂಭವಿಸಿ ಸೂಮಾರು ಒಂದು ತಿಂಗಳು ಕಳೆದರು ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಆದಷ್ಟು ಬೇಗನೆ ಈ ಹೇಯ ಕೃತ್ಯದಲ್ಲಿ ಭಾಗಿಯಾದ ಅತ್ಯಾಚಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ .
ಪ್ರತಿಭಟನೆಯಲ್ಲಿ ಪಾಪು ದಾರೆ , ಯಶೋದಾ ಬಿರಡಿ , ಬಸವರಾಜ ಹೀರೆಮಠ ರಾಜೀವ ಯರಗಣಿ , ಈಶ್ವರ ಪಾಟೀಲ , ಭರತೇಶ ಪಾಟೀಲ , ಬಸವರಾಜ ಕೋಟಗಿ , ಶಿವಲಿಂಗ ಕಂತಿ ಸೇರಿದಂತೆ ಇತರರು ಇದ್ದರು