RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ವಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕರಿಂದ ಸತ್ಕಾರ

ಗೋಕಾಕ:ವಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕರಿಂದ ಸತ್ಕಾರ 

ವಲಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಸಕರಿಂದ ಸತ್ಕಾರ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ.2-

 

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗೋಕಾಕ ವಲಯವು ಶೇ. 87.04 ಫಲಿತಾಂಶ ಬಂದಿದ್ದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 3ನೇ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ಹೇಳಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕುರಿತು ಪ್ರತಿಕ್ರಿಯೇ ನೀಡುತ್ತಿದ್ದ ಅವರು ಗೋಕಾಕ ವಲಯದಲ್ಲಿ ಒಟ್ಟು 4136 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 3615 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಲಯದ 15ಕ್ಕೂ ಹೆಚ್ಚು ಪ್ರೌಢ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿವೆ.
ಮುಂದಿನ ವರ್ಷ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಫಲಿತಾಂಶಕ್ಕಾಗಿ ಪ್ರಯತ್ನಿಸಲಾಗುವದೆಂದು ಬಳಗಾರ ತಿಳಿಸಿದರು.

ಶಾಸಕರಿಂದ ವಿದ್ಯಾರ್ಥಿಗೆ ಸತ್ಕಾರ :

ಗೋಕಾಕ ವಲಯದ ಉರುಬಿನಹಟ್ಟಿ (ಬೆ) ಗ್ರಾಮದ ಮಣಿಕಂಠ ಕೆಂಪಣ್ಣ ರಡ್ಡಿ ಈತನು 619 ಅಂಕಗಳನ್ನು ಪಡೆದು ವಲಯಕ್ಕೆ ಪ್ರಥಮ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಮೂರನೇ ಸ್ಥಾನ ಮತ್ತು ರಾಜ್ಯಕ್ಕೆ 6ನೇ ಸ್ಥಾನ ಪಡೆದ ನಿಮಿತ್ಯ ಗುರುವಾರದಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ಸತ್ಕಾರ ಮಾಡಿದರಲ್ಲದೆ ಆತನಿಗೆ 10,000ರೂ. ಫ್ರೋತ್ಸಾಹ ಧನವನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಾಧ್ಯಾಪಕ ಎ.ಬಿ.ತಿಮ್ಮವ್ವಗೋಳ, ಎಸ್‍ಡಿಎಸ್‍ಸಿ ಅಧ್ಯಕ್ಷ ಆರ್.ಬಿ.ಬಳೋಬಾಳ, ತಾ.ಪಂ. ಸದಸ್ಯ ಜಿ.ಬಿ.ಹಡಗಿನಾಳ, ಬಿ.ಆಯ್.ಓಬಿ, ಗಂಗಾಧರ ಪಾಟೀಲ ಸೇರಿದಂತೆ ಅನೇಕರು ಇದ್ದರು.

Related posts: