RNI NO. KARKAN/2006/27779|Sunday, December 22, 2024
You are here: Home » ಮುಖಪುಟ » ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ

ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ 

ರೈತರ ಅಭಿವೃದಿಗೆ ಸಹಕಾರಿ ಬ್ಯಾಂಕಗಳ ನೆರವು ದೊಡ್ಡದು : ಶಾಸಕ ಸತೀಶ

ಬೆಳಗಾವಿ:  ರೈತರು, ಕಾರ್ಮಿಕರ ಆರ್ಥಿಕಾಭಿವೃದ್ಧಿಗೆ ಸಹಕಾರಿ ಬ್ಯಾಂಕುಗಳು ಹೆಚ್ಚು ನೆರವು ನೀಡಿವೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ರೈತರು, ಕಾರ್ಮಿಕರಿಗೆ ಸುಲಭವಾಗಿ ಸಾಲ ಸೌಲಭ್ಯದ ನೆರವು ಸಿಗುತ್ತದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಕಾಕತಿಯಲ್ಲಿ ಮೂಡಲಗಿ ಶ್ರೀಭಾಗ್ಯಲಕ್ಷೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಸಹಕಾರಿ ಸಂಸ್ಥೆಯ 3ನೇ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮತ್ತು ಕಾರ್ಮಿಕರಿಗೆ ಸಾಲ ನೀಡಲು ಕಠಿಣ ನಿಯಮಗಳನ್ನುಹೇರಲಾಗುತ್ತದೆ. ಕೆಲವು ಖಾಸಗಿ ಬ್ಯಾಂಕುಗಳಲ್ಲಿಯೂ ಅದೇ ಪದ್ಧತಿ ಇದೆ.  ಆದರೆ ಸಹಕಾರಿ ಬ್ಯಾಂಕುಗಳು ಪರಸ್ಪರ ವಿಶ್ವಾಸದ ಆಧಾರದ ಮೇಲೆ ಕೆಲಸ ಮಾಡುತ್ತವೆ. ವಿಶ್ವಾಸ ಮತ್ತು ಸೇವೆ ಸಹಕಾರಿ ರಂಗದ ತಳಹದಿಯಾಗಿದ್ದು, ಕಾರ್ಮಿಕರು ಮತ್ತು ರೈತರು ಸಹಕಾರಿ ಸಂಸ್ಥೆಗಳನ್ನು ನಂಬಿಕೊಂಡೇ ಪ್ರಗತಿ ಸಾಧಿಸಿದ್ದಾರೆ. ಆರ್ಥಿಕ ಚಟುವಟಿಕೆ ಕೈಗೊಂಡಿದ್ದಾರೆ  ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳನ್ನು ನೆಚ್ಚಿಕೊಂಡೇ ರೈತರು ಕಾರ್ಮಿಕರು ಆರ್ಥಿಕ ಚಟುವಟಿಕೆ ನಡೆಸುತ್ತಾರೆ.   ಚಿಕ್ಕೋಡಿ ಮತ್ತು ಗೋಕಾಕದಲ್ಲಿ  ಅತಿ ಹೆಚ್ಚು ಸಹಕಾರಿ ಸಂಸ್ಥೆಗಳಿವೆ. ಜಿಲ್ಲೆಯ ಪ್ರಗತಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಗಮನಾರ್ಹ ಎಂದರು.

ಕಾಕತಿ ಶಿವಪೂಜಿಮಠದ ರಾಚಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಸಿಪಿಐ ಬಿ.ಎಸ್.ಲೋಕಾಪುರ, ಸಂಸ್ಥೆಯ ಸಂಸ್ಥಾಪಕ ಸುಭಾಷ ಪೂಜೇರಿ, ಕಾಕತಿ ಜಿ.ಪಂ.ಸದಸ್ಯ ಸಿದ್ದು ಸುಣಗಾರ, ತಾ.ಪಂ.ಸದಸ್ಯ ಕೋಳೇಕರ, ಗದಗಯ್ಯ ಶಿವಪೂಜಿಮಠ, ಬಸವರಾಜ ಬರಗಣ್ಣವರ, ಅರ್ಜುನ ನಾಯಕವಾಡಿ, ನ್ಯಾಯವಾದಿ ಎನ್.ಆರ್.ಲಾತೂರು, ಎನ್.ಎಂ.ಪಾಟೀಲ, ವೆಂಕಟೇಶ ಸೋನವಾಲ್ಕರ್, ಹನುಮಂತ ತೇರದಾಳ, ಹನುಮಂತ ಪೂಜಾರಿ, ಸಂತೋಷ ಗೋಳಿ ಇತರರು ಇದ್ದರು

Related posts: