ಗೋಕಾಕ:ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಮೇ 15 :
ನಗರದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರದಂದು ಮುಂಜಾನೆ ನಗರದ ಡಿ.ವಾಯ್.ಎಸ್.ಪಿ. ಕಚೇರಿ ಎದುರು ಸೇರಿದ ಕರವೇ ಕಾರ್ಯಕರ್ತರು, ಟ್ರಾಫಿಕ್ ತಡೆಗಟ್ಟುವಲ್ಲಿ ವಿಫಲವಾಗುತ್ತಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಪಿ.ಎಸ್.ಐ. ಶ್ರೀಶೈಲ್ ಬ್ಯಾಕೂಡ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಳೆದ ಹಲವಾರು ತಿಂಗಳಿನಿಂದ ಗೋಕಾಕ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬ್ಯಾಳಿಕಾಟಾ ವರೆಗೆ ಮತ್ತು ಬಸವೇಶ್ವರ ವೃತ್ತದಿಂದ ಅಜಂತಾ ಕೂಟವರೆಗಿನ ರಸ್ತೆ ಅಗಲೀಕರಣಗೊಂಡು ಉತ್ತಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿವೆ. ಆದರೆಈ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ನಾಲ್ಕು ಚಕ್ರ ವಾಹನ ಸವಾರರುತಮ್ಮ ವಾಹನಗಳನ್ನು ಎಲ್ಲಿ ಬೇಕೆಂದರಲ್ಲಿ ನಿಲುಗಡೆಗೊಳಿಸಿ ತಮ್ಮ ಬೇಜವ್ದಾರಿಯನ್ನು ತೋರುತ್ತಿದ್ದಾರೆ. ಇದರಿಂದ ಈ ಎರಡೂ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳು ತುಂಬಾತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರ ಪರಿಣಾಮ ಈ ಎರಡೂ ರಸ್ತೆಗಳು ಅಗಲೀಕರಣಗೊಂಡರೂ ಸಹ ಟ್ರಾಪಿಕ್ ಸಮಸ್ಯೆಯನ್ನು ಎದುರಿಸುತ್ತಿವೆ.
ಈ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಿ ಈ ಎರಡೂ ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆಗೊಳಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ವಾಹನ ನಿಲುಗಡೆಗೊಳಿಸಲು ಹೊಸ ಕಾನೂನನ್ನು ರೂಪಿಸಿ ಈ ಎರಡೂ ರಸ್ತೆಗಳಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯಿಂದ ಪಾರು ಮಾಡಿಎರಡೂ ರಸ್ತೆಗಳನ್ನು ಟ್ರಾಫಿಕ್ ಮುಕ್ತವನ್ನಾಗಿ ಮಾಡಬೇಕೆಂದು ಕರವೇ ಸಾರ್ವಜನಿಕರ ಪರವಾಗಿ ಮನವಿಯಲ್ಲಿ ವಿನಂತಿಸಿದೆ.
ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ಸಾಧಿಕ್ ಹಲ್ಯಾಳ, ದೀಪಕ್ ಹಂಜಿ, ಹನೀಪಸಾಬ ಸನದಿ, ರಮೇಶ ಕಮತಿ, ರೆಹಮಾನ ಮೊಕಾಶಿ, ಮುಗುಟ ಪೈಲವಾನ, ನಿಜಾಮ ನದಾಫ್, ಸುರೇಶ ಪತ್ತಾರ, ಮಲ್ಲು ಸಂಪಗಾರ, ನಿಯಾಜ್ ಪಟೇಲ್, ಮಹಾದೇವ ಮಕ್ಕಳಗೇರ, ದುರ್ಗಪ್ಪ ಗಾಡಿವಡ್ಡರ, ಬಸು ಹುಲಕುಂದ, ರಾಜೇಶ್ವರಿ ವಡೇರ, ಶೆಟ್ಟೆಪ್ಪ ಗಾಡಿವಡ್ಡರ, ದಸ್ತಗೀರ ಮುಲ್ಲಾ, ಫಕೀರಪ್ಪ ಗಣಾಚಾರಿ, ಬಸು ಗಾಡಿವಡ್ಡರ, ಅಮೀರಖಾನ ಜಗದಾಳೆ, ಚನ್ನಪ್ಪ ಬಂಡಿವಡ್ಡರ, ಶಿವಾನಂದ ತಹಶೀಲ್ದಾರ, ಶಿವಾನಂದ ಬಂಡಿವಡ್ಡರ, ಅಜಿತ್ ಮಲ್ಲಾಪೂರೆ, ಶಂಕರ ಬಂಡಿವಡ್ಡರ, ಹನಮಂತ ಕಮತೆ, ಯಲ್ಲಪ್ಪ ಧರ್ಮಟ್ಟಿ, ಮಹಾಂತೇಶ ಮರಿಕಟ್ಟಿ, ಅಪ್ಪಯ್ಯ ತಿಗಡಿ, ವಿಠ್ಠಲ ಕಮತಿ, ಸಂತು ಕೋಲಕಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.