ಹುದಲಿ : ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತು
ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ: ಹುದಲಿಯಲ್ಲಿ ಮಾಜಿ ಸಚಿವ ಸತೀಶ ಖಡಕ್ ಮಾತು
ಹುದಲಿ ಜು 10: ನನ್ನ ಟಿಕೇಟ್ ತಪ್ಪಿಸಲು ಯಾರಿಂದಲ್ಲೂ ಸಾದ್ಯವಿಲ್ಲ ಎಂದು
ಹುದಲಿಯಲ್ಲಿ ಎಐಸಿಸಿ ಕಾರ್ಯದರ್ಶಿ ಮಾಜಿ ಸತೀಶ ಜಾರಕಿಹೋಳಿ ಹೇಳಿದ್ದಾರೆ
ಹುದಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು
ಪರೋಕ್ಷವಾಗಿ ಸಹೋದರ ಲಖನ್ ಜಾರಕಿಹೋಳಿ ವಿರುದ್ದ ಖಡಕ್ ವಾಗ್ದಾಳಿ ನಡೆಸಿದ್ದಾರೆ
ನನ್ನ ಟಿಕೇಟ್ ಬೇಡ ಎನ್ನುವವರಿಗೆ ಟಿಕೇಟ್ ನಿರ್ಧರಿಸುವ ಶಕ್ತಿ ನನಗಿದೆ ಎಂದು ಬಹಿರಂಗವಾಗಿ ಗುಡುಗಿದ ಸತೀಶ ಜಾರಕಿಹೊಳಿ ರಾಜಕೀಯ ಜೀವನದಲ್ಲಿ ಯಾರಿಗೂ ನಾನು ಸುಲಭವಾಗಿ ಸೋಲು ಒಪ್ಪಿಕೊಂಡಿಲ್ಲ.
ಜಾರಕಿಹೋಳಿ ಕುಟುಂಬದಲ್ಲಿ ಮೂರನಾಲ್ಕು ಜನರಿದ್ದಾರೆ. ಅವರೆಲ್ಲಾ ಬೇರೆ ಬೇರೆ.ಆದ್ರೆ ನಾನೇ ಬೇರೆ.
ನಾನು ರಾಯಚೂರಿನಿಂದ,ಖಾನಾಪೂರದಿಂದ ಸ್ಪರ್ಧಿಸುತ್ತೇನೆ ಎಂದು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬೇಕಾಗಿಲ್ಲ ಎಂದು ಸತೀಶ ಜಾರಕಿಹೊಳಿ ಮನಬಿಚ್ಚಿ ತಮ್ಮ ಮಾತನ್ನು ಬಿಚ್ಚಿಟ್ಟಿದ್ದಾರೆ
ಮೊದಲು ಕಾಂಗ್ರೆಸ್ ಅಂತಿದ್ದರು,ಈಗ ಬಿಜೆಪಿ ಅಂತಾರೆ.ನಾಳೆ ಎಂಇಎಸ್ ಅಂದ್ರು ಆಶ್ಚರ್ಯವಿಲ್ಲ.
ಚುನಾವಣೆ ಸಮೀಸುತ್ತಿದ್ದಂತೆ ಈ ರೀತಿ ಟಿಕೇಟ್ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಗೋಕಾಕ ಮತಕ್ಷೇತ್ರದ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿ ಬರುವುದು ಬೇಡ.
ಕ್ರಿಕೇಟ್ ,ಕಬ್ಬಡಿ ಆಡಿಸಿ,ಗುಡಿಕಟ್ಟಿಸಲು ಹಣ ನೀಡುವವರು ಇಲ್ಲಿ ಬಂದು ಏನು ಮಾಡುತ್ತಾರೆ.
ನಾನು ಜನರನ್ನು ಹಾಳು ಮಾಡಲು ಹಣ ಹಂಚುವುದಿಲ್ಲ.
ಸಾಮಾಜಿಕ ಕಾರ್ಯಕ್ಕಾಗಿ ಹಣ ಖರ್ಚು ಮಾಡುತ್ತೇನೆ.
ಸಂಜೆ ಊಟ, ಖರ್ಚಿಗೆ ಹಣಕ್ಕಾಗಿ ಮಾರು ಹೋಗಬೇಡಿ ಎಂದು ತಮ್ಮ ಬೆಂಬಲಿಗರಿಗೆ ಕಿವಿಮಾತು ಹೇಳಿದರು
ಸಾಮಾಜಿಕ ಸಂಘ-ಸಂಸ್ಥೆಗೆ ಪ್ರತಿತಿಂಗಳು ಲಕ್ಷಾಂತರ ರೂ.ಖರ್ಚು ಮಾಡುತ್ತೇನೆ.
ಅದನ್ನ ಬಿಟ್ಟು ಕುರಿ ಹೊಡೆದು ಊಟ ಮಾಡಿಸಿ ಹಣ ಖರ್ಚುಳ ಮಾಡುವುದಿಲ್ಲ.
ನೂರು ರೂಪಾಯಿ ಕೊಟ್ರೆ ಸ್ವಾಭಿಮಾನ ಬೇರೆಯವರಿಗೆ ಧಾರೆ ಎರೆಯಬೇಡಿ.
ಯಮಕನಮರಡಿ ಕ್ಷೇತ್ರದ ಜನರಿಗೆ ಸತೀಶ ಜಾರಕಿಹೋಳಿ ಮನವಿ ಮಾಡಿಕೊಂಡರು
ಈಗಿನಿಂದಲೇ ಚುನಾವಣೆಗೆ ಸಿದ್ದರಾಗಿ,ನಾನು ಪ್ರಚಾರಕ್ಕೆ ಬರುವುದಿಲ್ಲ ನೀವೆ ಮುಂದೆ ನಿಂತು ಚುನಾವಣೆ ಮಾಡಿ ಕಳೆದ ಎಂಎಲ್ ಸಿ ಚುನಾವಣೆಯಲ್ಲಿ ಸೋಲಾಗಿದೆ ನಿಜ.
ಅದನ್ನ ಮುಂದಿನ ದಿನದಲ್ಲಿ ಬಡ್ಡಿ ಸಮೇತ ವಸೂಲಿ ಮಾಡೋಣ ಎಂದು ಸತೀಶ ಹೇಳಿದರು