RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಹೋರಾಟಕ್ಕೆ ಸ್ಪಂದಿಸಿದ ಪೊಲೀಸ ಇಲಾಖೆಯ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ

ಗೋಕಾಕ:ಹೋರಾಟಕ್ಕೆ ಸ್ಪಂದಿಸಿದ ಪೊಲೀಸ ಇಲಾಖೆಯ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ 

ಹೋರಾಟಕ್ಕೆ ಸ್ಪಂದಿಸಿದ ಪೊಲೀಸ ಇಲಾಖೆಯ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಮೇ 18 :

 
ಅಗಲಿಕರಣಗೊಂಡ ರಸ್ತೆಗಳ ಪಕ್ಕ ವಾಹನ ಸವಾರರು ಬೇಕಾಬಿಟ್ಟಿಯಾಗಿ ನಿಲ್ಲಿಸಿದ ವಾಹನಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಿ 14 ರಂದು ಕರವೇ ನಡೆಸಿದ ಹೋರಾಟಕ್ಕೆ ಸ್ವಂದಿಸಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಮುಂದಾಗಿರುವ ಪೊಲೀಸ ಇಲಾಖೆ ಹೊಸದಾಗಿ ನಿರ್ಮಾಣವಾಗಿರುವ ರಸ್ತೆಗಳಲ್ಲಿ ವಾಹನ ದಟ್ಟಣೆ ಯಾಗದಂತೆ ಹಾಗೂ ರಸ್ತೆ ಪಕದಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸದಂತೆ ಕಠಿಣ ಕ್ರಮ ಕಾನೂನು ರಚಿಸಿ ಪ್ರತಿ ದಿನ ಕರ್ತವ್ಯಕ್ಕೆ ಪೊಲೀಸರನ್ನು ನೇಮಿಸಿ ಕಾರ್ಯ ಪ್ರವೃತವಾಗಬೇಕು ಅಂದಾಗ ಮಾತ್ರ ಟ್ರಾಫಿಕ್ ನಿಯಂತ್ರಣ ಸಾಧ್ಯ . ಆ ನಿಟ್ಟಿನಲ್ಲಿ ಪೊಲೀಸರು ಕಾರ್ಯಗತವಾಗಬೇಕು . ಒಂದೆರಡು ದಿನ ಕಾರ್ಯಚರಣೆ ಮಾಡಿ ಕೈಕಟ್ಟಿ ಕುಳಿತರೆ ಸಾಲದು ಶಾಶ್ವತವಾಗಿ ಪರಿಹಾರ ದೊರಕಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳ ಕಛೇರಿ ಎದುರು ಈ ವಿಷಯ ಕುರಿತು ಪ್ರತಿಭಟಿಸಲಾಗುವದು ಎಂದು ಖಾನಪ್ಪನವರ ತಿಳಿಸಿದ್ದಾರೆ

Related posts: