ಘಟಪ್ರಭಾ:ಹೆಂಡತಿ ಸಾವಿನಿಂದ ಮನನೊಂದ ಪತಿ ನೇಣಿಗೆ ಶರಣು
ಹೆಂಡತಿ ಸಾವಿನಿಂದ ಮನನೊಂದ ಪತಿ ನೇಣಿಗೆ ಶರಣು
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೆ 19 :
ಅನಾರೋಗ್ಯಕ್ಕೆ ಒಳಗಾಗಿದ್ದ ಹೆಂಡತಿ ಸಾವಿನಿಂದ ಮನನೊಂದ ಪತಿ ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಮೀಪದ ಧುಪದಾಳ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಭೀಮಶಿ ಕಳ್ಳಿಮನಿ (48) ಮೃತ ದುರ್ದೈವಿ. ಬಸವರಾಜನ ಹೆಂಡತಿ ಲಗಮವ್ವಾ (40) ಅನೇಕ ದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಶನಿವಾರ ಸಂಜೆ ಮೃತ ಪಟ್ಟಿದ್ದಾಳೆ. ಹೆಂಡತಿಯ ಸಾವಿನಿಂದ ಮನನೊಂದ ಬಸವರಾಜ ಘಟಪ್ರಭಾ ಕೆನಾಲ್ ಹತ್ತಿರ ರಾತ್ರಿ ವೇಳೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಘಟಪ್ರಭಾ ಪೊಲೀಸರು ತನಿಖೆಯನ್ನು ಮುಂದೊರಿಸಿದ್ದಾರೆ.