RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಕಾರ್ಯಕ್ರಮ ಕುರಿತು ಜಾಗೃತಿ ಜಾಥಾ

ಘಟಪ್ರಭಾ:ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಕಾರ್ಯಕ್ರಮ ಕುರಿತು ಜಾಗೃತಿ ಜಾಥಾ 

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಕಾರ್ಯಕ್ರಮ ಕುರಿತು ಜಾಗೃತಿ ಜಾಥಾ

 
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಮೇ 27:

 
ಭಾರತ ಸೇವಾ ದಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಕಾರ್ಯಕ್ರಮ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಂದು ಜರುಗಿತು.
ಕಾರ್ಯಕ್ರಮವನ್ನು ಸ್ವಾತ್ಯಂತ್ರ ಯೋದರಾದ ಎ.ಎಸ್.ಕರಲಿಂಗನವರ ಉದ್ಘಾಟಿಸಿದರು. ಭಾರತ ಸೇವಾದಳದ ಬೆಳಗಾವಿ ಜಿಲ್ಲಾ ಸಂಚಾಲಕರಾದ ಬಸವರಾಜ ಹಟ್ಟಿಗೌಡರ ಮಾತನಾಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವದರಿಂದ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಅಕ್ಷರ ದಾಸೋಹ, ಕ್ಷೀರ ಭಾಗ್ಯ, ಲೇಖನಿ ಸಾಮಗ್ರಿ, ಬೂಟು ಕಾಲುಚೀಲ, ಜಿಲ್ಲಾ ಶೈಕ್ಷಣಿಣ ಪ್ರವಾಸ, ವಿದ್ಯಾರ್ಥಿ ಭತ್ಯೆ, ಕಂಪ್ಯೂಟರ ತರಬೇತಿ, ಯೋಗ ಮತ್ತು ಸೈನಿಕ ಶಿಕ್ಷಣ ಇನ್ನೂ ಅನೇಕ ಸೌಲಭ್ಯಗಳು ದೊರೆಯುತ್ತವೆ. ಈ ಶೈಕ್ಷಣಿಕ ವರ್ಷದಿಂದ ಮಲ್ಲಾಪೂರ ಪಿಜಿ ಶಾಲೆಗೆ 1 ರಿಂದ 8 ನೇ ತರಗತಿ ವರೆಗೆ ಆಂಗ್ಲ ಮಾದ್ಯಮ ಶಿಕ್ಷಣ ಪ್ರಾರಂಭವಾಗಿದೆ ಎಂದರು.
ನಂತರ ಭಾರತ ಸೇವಾ ದಳದ ಕಾರ್ಯಕರ್ತರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಗ್ರಾಮದಲ್ಲಿ ಜಾಥಾ ನಡೆಸಿ. ಮನೆ, ಮನೆಗೆ ಕರ ಪತ್ರಗಳನ್ನು ಹಂಚಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್.ಎಚ್.ಗಿರೆಡ್ಡಿ, ಮುಖ್ಯೋಪಾದ್ಯಾರಾದ ಈಶ್ವರ ರಾಜಾಪುರೆ, ಈಶ್ವರ ಚೌಗಲಾ, ನ್ಯಾಯವಾದಿ ಶಿವಾನಂದ ಕಬ್ಬೂರ, ಬಸವರಾಜ ಪಟ್ಟಣಶೆಟ್ಟಿ, ಶಾಲೆಯ ಗುರುಗಳು, ಗುರುಮಾತೆಯರು ಸಾರ್ವಜನಿಕರು ಇದ್ದರು.

Related posts: