RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಶ್ರೀ ಭಗೀರಥ ಮಹಾರಾಜರ ಕಾರ್ಯ ಅವಿಸ್ಮರಣಿಯವಾದದ್ದು

ಗೋಕಾಕ:ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಶ್ರೀ ಭಗೀರಥ ಮಹಾರಾಜರ ಕಾರ್ಯ ಅವಿಸ್ಮರಣಿಯವಾದದ್ದು 

ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಶ್ರೀ ಭಗೀರಥ ಮಹಾರಾಜರ ಕಾರ್ಯ ಅವಿಸ್ಮರಣಿಯವಾದದ್ದು

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 27 :

 

ತನ್ನ ಪೂರ್ವಜರ ಸದ್ಗುತಿಯನ್ನು ದೊರಕಿಸಲು ಅವಿರತವಾಗಿ ಪ್ರಯತ್ನಿಸಿ ದೇವನದಿಯಾದ ಗಂಗೆಯನ್ನು ಭೂಲೋಕ ತರುವ ಮೂಲಕ ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಶ್ರೀ ಭಗೀರಥ ಮಹಾರಾಜರ ಕಾರ್ಯ ಅವಿಸ್ಮರಣಿಯವಾದದ್ದು ಎಂದು ದುರದುಂಡಿ ಗ್ರಾಮದ ಶ್ರೀ ಸಿದ್ದಲಿಂಗಯ್ಯ ಹಿರೇಮಠ ಸ್ವಾಮಿಗಳು ಹೇಳಿದರು.
ಸೋಮವಾರದಂದು ಸಮೀಪದ ಅರಭಾಂವಿಯ ಸತ್ತಿಗೇರ ತೋಟದಲ್ಲಿ ಉಪ್ಪಾರ ಸಮಾಜದ ವತಿಯಿಂದ ಹಮ್ಮಿಕೊಂಡ ಮಹರ್ಷಿ ಶ್ರೀ ಭಗೀರಥ ಜಯಂತಿ ಉತ್ಸವದ ಕಾರ್ಯಕ್ರಮದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಠಿಣವಾದ ಹಾಗೂ ಸುದೀರ್ಘವಾದ ತಪಸ್ಸಿನಿಂದ ದೇವನದಿ ಗಂಗೆಯನ್ನು ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಕರೆ ತರಲು ಶ್ರಮಿಸಿದ ಭಗೀರಥ ಮಹರ್ಷಿಗಳು ಎಂತಹ ವಿಘ್ನಗಳು ಬಂದರೂ ಕೂಡಾ ಎದೆಗುಂದದೆ ಸತತ ಪ್ರಯತ್ನದಿಂದ ತಮ್ಮ ಕಾರ್ಯ ಸಾಧನೆಯಲ್ಲಿ ಯಶಸ್ವಿಯಾಗಿ ಮೂಲಕ ಪ್ರಯತ್ನಕ್ಕೆ ಇನ್ನೂಂದು ಹೆಸರಾಗುವ ಮೂಲಕ ಇಂದಿಗೂ ಚಿರಸ್ಥಾಯಿಯಾಗಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆಂಚಪ್ಪ ಸಂಪಗಾಂವಿ, ಬಸವರಾಜ ಆಲೋಶಿ, ಯಲ್ಲಪ್ಪ ಅರಭಾಂವಿ, ಕೆಂಚಪ್ಪ ಮಂಟೂರ, ಪಿಕೆಪಿಎಸ್ ಸದಸ್ಯ ವೀರಭದ್ರ ಜೋನಿ, ವಿಠ್ಠಲ ಉಳ್ಳಾಗಡ್ಡಿ, ಸಿದ್ರಾಮ ಸಂಪಗಾಂವಿ, ರಾಮಪ್ಪ ಅರಭಾಂವಿ, ಮಲ್ಲಪ್ಪ ಜೋನಿ, ಅಪ್ಪಯ್ಯ ಮಂಟೂರ, ರಾಮಪ್ಪ ಸಂಪಗಾಂವಿ, ವೆಂಕಣ್ಣ ಜಡಕಿನ, ಹಣಮಂತ ನಂದಿ, ಸತ್ತೆಪ್ಪ ಸಂಪಗಾಂವಿ, ಲಕ್ಷ್ಮಣ ನಿಂಗಣ್ಣವರ, ಕಾಮಣ್ಣ ಸಣ್ಣಲಗಮಣ್ಣವರ, ಪರಶು ಸಂಪಗಾಂವಿ, ದುಂಡಪ್ಪ ಅರಭಾಂವಿ, ಅಪ್ಪು ಮಂಟೂರ, ರಾಮ ಮೀಶೆಪ್ಪಗೋಳ, ದುಂಡಪ್ಪ ಸತ್ತಿಗೇರಿ, ಮಡಿವಾಳಪ್ಪ ಮಡಿವಾಳರ, ಯಮನಪ್ಪ ಸಂಪಗಾಂವಿ, ವಿಠ್ಠಲ ಮಡಿವಾಳರ, ಭೀಮಶಿ ಕುಸಬಿ, ಶಿವಾನಂದ ಮೇದಾರ, ಮಾನಿಂಗ ಕಬಾಡಗಿ, ಬಸವರಾಜ ಅರಭಾಂವಿ, ಯಲ್ಲಪ್ಪ ಬಡಲಕ್ಕನವರ, ನೀಲಪ್ಪ ಮಾಳ್ಯಾಗೋಳ, ಸುರೇಶ ಸಂಪಗಾಂವಿ, ದುಂಡಪ್ಪ ಕಡಕೋಳ ಸೇರಿದಂತೆ ಅನೇಕರು ಇದ್ದರು.

Related posts: