RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದೇಶದ ಪ್ರಗತಿಯಲ್ಲಿಕಾರ್ಮಿಕರ ಶ್ರಮ ಅಪಾರವಾಗಿದೆ : ನಟಿ ಮಾಲತಿಶ್ರೀ

ಗೋಕಾಕ:ದೇಶದ ಪ್ರಗತಿಯಲ್ಲಿಕಾರ್ಮಿಕರ ಶ್ರಮ ಅಪಾರವಾಗಿದೆ : ನಟಿ ಮಾಲತಿಶ್ರೀ 

ದೇಶದ ಪ್ರಗತಿಯಲ್ಲಿಕಾರ್ಮಿಕರ ಶ್ರಮ ಅಪಾರವಾಗಿದೆ : ನಟಿ ಮಾಲತಿಶ್ರೀ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 29 :

 

ಕಾರ್ಮಿಕರು ಇಲ್ಲದೇ ದೇಶವಿಲ್ಲ, ದೇಶದ ಪ್ರಗತಿಯಲ್ಲಿ ಅವರ ಶ್ರಮ ಅಪಾರವಾಗಿದೆ ಎಂದು ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟಿ ಮಾಲತಿಶ್ರೀ ಹೇಳಿದರು.
ಮಂಗಳವಾರದಂದು ಸಂಜೆ ನಗರದ ಕಿಲ್ಲಾದಲ್ಲಿರುವ ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಬೆಳಗಾವಿಯ ಕರ್ನಾಟಕ ಸ್ವರಾಜ ಸಂಘ ಹಾಗೂ ಗೋಕಾಕದ ಗುರು-ಮಾರ್ಗ ಶೈಕ್ಷಣಿಕ ಮಾಸ ಪತ್ರಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಮಿಕರ ಶ್ರಮದಿಂದ ಇಂದು ಎಲ್ಲರೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ, ಕಾರ್ಮಿಕರು ಹಾಗೂ ಮಾಲಿಕರು ಎಂಬ ಬೇಧ-ಬಾವ ತೊರೆದು ಸಮಾನರೆಂದು ತಿಳಿದು ಕಾರ್ಯಪ್ರವೃತ್ತರಾದರೆ ತಮ್ಮ ಅಭಿವೃದಿಯ ಜೊತೆಗೆ ದೇಶದ ಪ್ರಗತಿ ಸಾಧ್ಯ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಆಚರಣೆಗೆ ತರುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ಗಂಗೋತ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ಮಠಾಧಿಕಾರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಾರ್ಮಿಕರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಕ.ಸಾ.ಪ. ತಾಲೂಕಾಧ್ಯಕ್ಷ ಮಹಾಂತೇಶ ತಾವಂಶಿ, ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ, ಗುರು-ಮಾರ್ಗ ಶೈಕ್ಷಣಿಕ ಮಾಸಪತ್ರಿಕೆ ಸಂಪಾದಕ ವಿರೇಂದ್ರ ಪತಕಿ, ಕರ್ನಾಟಕ ಸ್ವರಾಜ್ಯ ಸಂಘದ ಅಧ್ಯಕ್ಷ ಅನೀಲ ಚಂದನವಾಲೆ, ಹೆಸ್ಕಾಂನ ಅಧಿಕಾರಿ ಈರಡ್ಡಿ, ನಗರಸಭೆ ಕಂದಾಯ ನಿರೀಕ್ಷಕ ಆಯ್.ಎ.ಕುಂಬಾರಿ, ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ, ಡಾ|| ರಮೇಶ ಪಟಗುಂದಿ, ಲಕ್ಷ್ಮಣ ಪಟಾತ, ಕೆ.ಡಿ.ಇಂಚಲ, ರಾಜಶೇಖರ ಬಡೀಗೇರ, ಬಸವರಾಜ ಕೋನನ್ನವರ, ಈರಯ್ಯ ಪೂಜೇರಿ, ಶಂಕರ ಗಡ್ಡಿ ಇದ್ದರು.
ಕಲಾವಿದ ಈಶ್ವರಚಂದ್ರ ಬೆಟಗೇರಿ ಸ್ವಾಗತಿಸಿ, ನಿರೂಪಿಸಿದರು. ಆರ್.ಎಲ್.ಮಿರ್ಜಿ ವಂದಿಸಿದರು.

Related posts: