RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿಶ್ವೇಶ್ವರ ಭಟ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಗೋಕಾಕ:ವಿಶ್ವೇಶ್ವರ ಭಟ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ 

ವಿಶ್ವೇಶ್ವರ ಭಟ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 30 :

 

ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಗೋಕಾಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗೋಕಾಕ ಪ್ರೇಸ್ ಅಸೋಶಿಯೇಶನ್ ವತಿಯಿಂದ ಗುರುವಾರದಂದು ತಹಶೀಲದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪತ್ರಕರ್ತರ ಚಂದ್ರಶೇಖರ ಕೊಣ್ಣೂರ ಮಾತನಾಡಿ, ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪರಾಜೀತ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿಯವರು ಮೈಸೂರಿನ ಪ್ರತಿಷ್ಠಿತ ಹೋಟೆಲ ಒಂದರಲ್ಲಿ ಮಧ್ಯಪಾನ ಮಾಡಿ ಹೋಟೆಲ್ ಸಿಬ್ಬಂಧಿಯೊಂದಿಗೆ ಜಗಳವಾಡಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರ ವಿರುದ್ಧ ನಿಖೀಲ್ ಹರಿಹಾಯ್ದು ರಂಪಾಟ ಮಾಡಿರುವ ಕುರಿತು ವಿಶ್ವವಾಣಿ ಪತ್ರಿಕೆ ಬಲ್ಲಮೂಲಗಳಿಂದ ಲಭ್ಯವಾದ ಮಾಹಿತಿಯನ್ನಾಧರಿಸಿ ವರದಿ ಮಾಡಿತ್ತು, ಕೆಲವು ರಾಜಕಾರಣಿಗಳು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸಂಪಾದಕ ವಿಶ್ವೇಶ್ವರ ಭಟ್ ಅವರ ಮೇಲೆ 8ಸೇಕ್ಷನಗಳಡಿಯಲ್ಲಿ ಕೇಸು ದಾಖಲು ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈ ಕೂಡಲೆ ದಾಖಲಿಸಿದ ಪ್ರಕರಣವನ್ನು ಮರಳಿ ಪಡೆಯುವಂತೆ ಆಗ್ರಹಿಸಿದರು.
ಕಳೆದ ಹಲವು ವರ್ಷಗಳಿಂದ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತ ಬಂದಿದ್ದರು ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೇ ಸಂಪಾದಕರ ಮೇಲೆ ಈ ರೀತಿಯ ಕೇಸು ದಾಖಲು ಮಾಡುತ್ತಿರುವದನ್ನು ಕಂಡರೆ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ ನಡೆದಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಸ್ ಬಿ ಧಾರವಾಡಕರ, ವಸಂತ ಹವಾಲ್ದಾರ, ಪ್ರಭಾಕರ, ಈಶ್ವರ ನಾಗನೂರ, ಪತ್ರಕರ್ತರಾದ ಭೀಮಶಿ ಭರಮಣ್ಣವರ, ಬಸವರಾಜ ಕುರೇರ, ಸಾಧಿಕ ಹಲ್ಯಾಳ, ಬಸವರಾಜ ದೇಶನೂರ, ಪ್ರದೀಪ ನಾಗನೂರ, ಯೂನುಸ್ ನದಾಫ್, ಅನೀಲ ಮುರಾರಿ, ಸತೀಶ ಮನ್ನಿಕೇರಿ, ಅರವಿಂದ ದೇಶನೂರ, ಅಡಿವೆಪ್ಪ ಪಾಟೀಲ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಾದ ಕೃಷ್ಣಾ ಖಾನಪ್ಪನವರ, ಪವನ ಮಹಾಲಿಂಗಪೂರ, ಅಬ್ದುಲಖಾದರ ಯರಸೂಲ ಸೇರಿದಂತೆ ಇತರರು ಇದ್ದರು.

Related posts: