ಮೂಡಲಗಿ:ಶಿಕ್ಷಕರ ಹಿಂಬಡ್ತಿ ಖಂಡಿಸಿ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಧರಣಿ ಸತ್ಯಾಗ್ರಹ
ಶಿಕ್ಷಕರ ಹಿಂಬಡ್ತಿ ಖಂಡಿಸಿ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಧರಣಿ ಸತ್ಯಾಗ್ರಹ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಮೇ 30 :
ರಾಜ್ಯದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೇ 2017 ರಲ್ಲಿ ರಚಿಸಿರುವ ಹೊಸ ಸಿ & ಆರ್ ನಿಯಮದಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರನ್ನು 1 ರಿಂದ 5 ನೇ ತರಗತಿಗಳ ಶಿಕ್ಷಕರೆಂದು ಪರಿಗಣಿಸಿ ಹಿಂಬಡ್ತಿ ನೀಡಿರುತ್ತಾರೆ. ಈ ಕ್ರಮವನ್ನು ಖಂಡಿಸಿ ಜೂನ್ 1 ಶನಿವಾರದಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಧರಣಿ ಸತ್ಯಾಗ್ರಹವನ್ನು ಮದ್ಯಾಹ್ನ 1 ರಿಂದ 4 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಸಂಘದ ಅಧ್ಯಕ್ಷ ಪ್ರಕಾಶ ಕುರಬೇಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸಂಘದ ನಿರ್ಣಯದಂತೆ ರಾಜ್ಯಾದ್ಯಂತ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ಜುಲೈ 1 ನೇ ತಾರೀಖಿನಿಂದ 6 ರಿಂದ 8 ನೇ ತರಗತಿಗಳಿಗೆ ಪಾಠ ಬೋಧನೆ ನಿಲ್ಲಿಸುವ ಮೂಲಕ ಈ ಸಂದೇಶವನ್ನು ಇಲಾಖೆಗೆ ಹಾಗೂ ಸರ್ಕಾರದ ಗಮನಕ್ಕೆ ತರುವದಾಗಿದೆ. ಮೂಡಲಗಿ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ ನಂ. 9972555258, 9986981938, 9902893924, 9535223533, 9632331614, 8152830367 ಸಂಪರ್ಕಿಸಲು ಕೊರಲಾಗಿದೆ.