RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಕೃತ್ಯಕ್ಕೆ ವಿರೋಧ : ಗೋಕಾಕದಲ್ಲಿ ಬಜರಂಗದಳ ಪ್ರತಿಭಟನೆ

ಗೋಕಾಕ:ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಕೃತ್ಯಕ್ಕೆ ವಿರೋಧ : ಗೋಕಾಕದಲ್ಲಿ ಬಜರಂಗದಳ ಪ್ರತಿಭಟನೆ 

ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಕೃತ್ಯಕ್ಕೆ ವಿರೋಧ : ಗೋಕಾಕದಲ್ಲಿ ಬಜರಂಗದಳ ಪ್ರತಿಭಟನೆ
ಗೋಕಾಕ ಜು 11: ಕಾಶ್ಮೀರದ ಅನಂತನಾಗದಲ್ಲಿ ಅಮರನಾಥ ಯಾತ್ರಿಗಳ ಮೇಲೆ ಆದ ಭಯೋತ್ಪಾದಕ ಹಲ್ಲೆಯನ್ನು ಹಾಗೂ ಮಂಗಳೂರ ಜಿಲ್ಲೆಯ ಬಂಟ್ವಾಳದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಶರತ ಮಡಿವಾಳ ಹತ್ಯೆಯನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಜಿಲ್ಲಾ ಸಂಚಾಲಕ ಸದಾಶಿವ ಗುದಗಗೋಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿ ತಾಲೂಕಾ ದಂಡಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು
ಇಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಬಜರಂಗದಳ ಕಾರ್ಯಕರ್ತರು ನಾಡವಿರೋಧಿ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು

ನಿನ್ನೆ ಕಾಶ್ಮೀರಿನ ಅನಂತನಾಗದಲ್ಲಿ ಅಮರನಾಥ ಯಾತ್ರಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಸುಮಾರು 7 ಜನ ಭಕ್ತಾದಿಗಳ ಹತ್ಯೆ ಗೈದಿದ್ದಾರೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ಹಿಂತಹ ದೇಶದ್ರೋಹಿ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಸುಮಾರು ಒಂದು ತಿಂಗಳಕಾಲ ನಡೆಯುವ ಯಾತ್ರೆಯಲ್ಲಿ ಭಾಗವಹಿಸುವ ಭಕ್ತಾಧಿಗಳಿಗೆ ಸೂಕ್ತ ಸುರಕ್ಷತೆಯನ್ನು ಒದುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರಲ್ಲದೆ ಆರ್.ಎಸ್.ಎಸ್ ಕಾರ್ಯಕರ್ತ ಶರತ ಮಡಿವಾಳನನ್ನು ಅಮಾನುಷವಾಗಿ ಹತ್ಯೆ ಮಾಡಿದ ಮುಸ್ಮಾನ ಗೂಂಡಾಗಳನ್ನು ತಕ್ಷಣದಲ್ಲಿ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಜರಂಗದಳ ಕಾರ್ಯಕರ್ತರು ಸರಕಾರವನ್ನು ಆಗ್ರಹಿಸಿದ್ದಾರೆ

ಪ್ರತಿಭಟನೆಯಲ್ಲಿ ಬಜರಂಗದಳ ಪ್ರಮುಖರಾದ ನಾರಾಯಣ ಮಠಾಧಿಕಾರಿ , ಸದಾಶಿವ ಗುದಗಗೋಳ , ಅಜಿತ ವಾಕುಡೆ , ಗುರು ಬೆನವಾಡ , ಪ್ರವಿಣ ಚಕ್ಕಡಿ , ದಯಾನಂದ ಮಾವರಕರ , ರಮೆಶ ಬಿರಡಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು
ಭಾರತದ ಅವಿಭಾಜ್ಯ ಅಂಗವಾದ ಕಾಶ್ಮೀರದಲ್ಲಿ ಪಾಕಿಸ್ತಾನಿ ಪ್ರೇರಿತ ಜಿಹಾದಿ ಭಯೋತ್ಪಾದಕರು ಹಾಗೂ ಸ್ಥಳೀಯ ಭಯೋತ್ಪಾದಕರು ಅಮಾಯಕರ ಮೇಲೆ ಹಲ್ಲೆ ನಡೆಸುತ್ತ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡಿ ದೇಶದ ಏಕತೆ ಮತ್ತು ಅಖಂಡತೆಗೆ ದೊಡ್ಡ ಸಮಸ್ಯೆ ಯಾಗಿದ್ದಾರೆ

Related posts: