ಮೂಡಲಗಿ:ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ನ್ಯಾಯ ದೊರಕಿಸಿ ಕೊಡಲಾಗುವದು
ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕರ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ನ್ಯಾಯ ದೊರಕಿಸಿ ಕೊಡಲಾಗುವದು
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 1 :
ಸೇವಾ ನಿರತ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕರ ಪ್ರಮುಖ ಬೇಡಿಕೆಯಾಗಿರುವ ಪದೋನ್ನತಿ ಹಾಗೂ ಪದನಾಮಕರಣದ ಕುರಿತು ಸರಕಾರದ ಗಮನಕ್ಕೆ ತಂದು ಸೂಕ್ತ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಮಾಡಲಾಗುವದು ಎಂದು ಮಾಜಿ ಸಚಿವ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಪಟ್ಟಣದಲ್ಲಿ ಜರುಗಿದ sಶಿಕ್ಷಕರ ವೃಂದ ಮತ್ತು ನೇಮಕಾತಿ ತಿದ್ದುಪಡಿ ಕುರಿತು ಮನವಿ ಸ್ವೀಕರಿಸಿ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ಸಮಸ್ಯೆಯ ಕುರಿತು ಚರ್ಚಿಸಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾರ್ಗದರ್ಶನ ಪಡೆದು ಸೂಕ್ತ ನಿಯಮಾಳಿಗಳಿಗೆ ತಿದ್ದುಪಡಿ ತರಲು ಪ್ರಯತ್ನಿಸುವೆ. ಶಾಲೆಗಳು ಪ್ರಾರಂಭಗೊಂಡಿದ್ದು ಮಕ್ಕಳನ್ನು ಶೈಕ್ಷಣಿಕವಾಗಿ ತಯಾರು ಮಾಡುವ ಕಾರ್ಯ ತಮ್ಮ ಮೇಲಿದೆ. ಶಾಲೆಗಳಿಗೆ ಭೌತಿಕವಾಗಿ ಅಗತ್ಯವಿರುವ ಕೆಲಸಗಳನ್ನು ಮಾಡಿಕೊಡಲಾಗುವದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ವೃಂದ ಮತ್ತು ನೇಮಕಾರಿ ಸಿ & ಆರ್ ಬದಲಾವಣೆ ಕುರಿತು ಒಂದು ದಿನದ ಸಾಂಕೇತಿಕ ಧರಣಿ ಕಾರ್ಯಕ್ರಮ ಜರುಗಿತು. ಧರಣಿ ಸಂದರ್ಭದಲ್ಲಿ ಬಿಇಒ ಅಜೀತ ಮನ್ನಿಕೇರಿ ಬೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದರು. ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವದು ಎಂದು ಹೇಳಿದರು.
ಸತ್ಯಾಗ್ರಹದಲ್ಲಿ ಎಸ್.ಎಮ್ ಲೋಕನ್ನವರ, ಬಿ.ಆರ್ ತರಕಾರ, ಆರ್ ಎಮ್ ಮಹಾಲಿಂಗಪೂರ, ಎಲ್ ಎಮ್ ಬಡಕಲ, ಮಾಲತೇಶ ಸಣ್ಣಕ್ಕಿ, ಎ.ಪಿ ಪರಸಣ್ಣವರ, ಸೇವಾ ನಿರತ ಪದವೀಧರ ಮೂಡಲಗಿ ಘಟಕದ ಆಧ್ಯಕ್ಷ ಪ್ರಕಾಶ ಕುರಬೇಟ, ಕಾರ್ಯದರ್ಶಿ ಅಶೋಕ ರಾಘನ್ನವರ, ಸಿ.ಎಸ್ ಮೊಹಿತೆ, ಅಭಿನಂದನ ಜರಾಳೆ, ಕೆ.ಆರ್ ಡೊಳ್ಳಿ ಹಾಗೂ ವಲಯ ವ್ಯಾಪ್ತಿಯ 150 ಕ್ಕೂ ಹೆಚ್ಚು ಶಿಕ್ಷಕರು ಧರಣಿ ಸತ್ಯಾಗ್ರಹದಲ್ಲಿ ಹಾಜರಿದ್ದರು.