ಗೋಕಾಕ:ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ಆಚರಣೆ
ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ಆಚರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 1 :
ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಶಿವಾ ಪೌಂಡೇಶನ್‍ನ ಅನಾಥ ಮಕ್ಕಳ ಆಶ್ರಮ ಶಾಲೆಯಲ್ಲಿ ಶನಿವಾರದಂದು ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಜನ್ಮ ದಿನಾಚರಣೆಯ ನಿಮಿತ್ಯ ಬಿಜೆಪಿ ನಗರ ಘಟಕದಿಂದ ಅನಾಥ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಮುಖಂಡರಾದ ಲಕ್ಕಪ್ಪ ತಹಶೀಲದಾರ, ಸಂತೋಷ ಹುಂಡೇಕರ, ಚಿದಾನಂದ ದೇಮಶೆಟ್ಟಿ, ಶಕೀಲ ಧಾರವಾಡಕರ, ಜಗದೀಶ ಸದರಜೋಶಿ, ತವನಪ್ಪ ಬೆನ್ನಾಡಿ, ಶಿವು ಫಿರೋಜಿ, ಶಾನವಾಜ ಧಾರವಾಡಕರ, ರಾಜು ಕಿರಣಗಿ ಸೇರಿದಂತೆ ಅನೇಕರು ಇದ್ದರು.