RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ: ಕಾಂಗ್ರೆಸ್ ಭೂತ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯ ಟ್ಯಾಗೋರ್ ಆರೋಪ

ಗೋಕಾಕ:ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ: ಕಾಂಗ್ರೆಸ್ ಭೂತ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯ ಟ್ಯಾಗೋರ್ ಆರೋಪ 

ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ: ಕಾಂಗ್ರೆಸ್ ಭೂತ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಮಾಣಿಕ್ಯ ಟ್ಯಾಗೋರ್ ಆರೋಪ
ಗೋಕಾಕ ಜು 11: ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಎಐಸಿಸಿ ಪ್ರ. ಕಾರ್ಯದರ್ಶಿ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯರಾವ್ ಟ್ಯಾಗೋರ್ ಹೇಳಿದರು

ಅವರು ನಗರದ ಸಮುದಾಯ ಭವನದಲ್ಲಿ ಗೋಕಾಕ ತಾಲೂಕಿನ ಕಾಂಗ್ರೇಸ ಸಮಿತಿಯ ಹಮ್ಮಿಕೊಂಡಿದ್ದ ಬೂತ ಮಟ್ಟದ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಿಡಿದರು

ಸುಮಾರು 46 ದೇಶಗಳನ್ನು ಸುತ್ತಾಡಿ ಶಾಂತಿಯನ್ನು ಪಾಠವನ್ನು ಹೇಳುವ ಪ್ರಧಾನಿ ಮೋದಿ ಅವರು ಅಮರನಾಥ ಯಾತ್ರಿಗಳಿಗೆ ರಕ್ಷಣೆ ಕೋಡುವಲ್ಲಿ ವಿಫಲರಾಗಿದ್ದಾರೆ ಕಾಂಗ್ರೇಸ ಸರಕಾರ ವಿದ್ದಾಗ ಅಮರನಾಥ ಯಾತ್ರಿಗಳಿಗೆ ಸೂಕ್ತ ರಕ್ಷಣೆ ಒದಗಿಸಿತ್ತು
ಇಂದು ಕೇಂದ್ರ ಸರಕಾರ ಈ ವಿಷಯವಾಗಿ ಎಡವಿದೆ

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು 3 ವರ್ಷದಲ್ಲಿ ಬರೀ 2 ಲಕ್ಷ ಉದ್ಯೋಗ ಸೃಷ್ಟಿಸಿ ಜನರಿಗೆ ಮೋಸ ಮಾಡಿದ್ದಾರೆ ಹಿತಂಹ ಮೋಸ ಮಾಡುವವರ ಕೈಯಲ್ಲಿ ಅಧಿಕಾರ ಕೋಡಬಾರದು ಎಂದ ಮಾಣಿಕ್ಯ ಟ್ಯಾಗೋರ್ ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳನ್ನು ಮತದಾರರ ಮನೆ ಮನೆಗೆ ತಲುಪಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲರು ಶಕ್ತಿಮೀರಿ ಕಾರ್ಯಮಾಡಬೇಕೆಂದು ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಯ ಟ್ಯಾಗೋರ್ ಹೇಳಿದರು
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ತಳದಪ್ಪ ಅಮ್ಮಣಗಿ ಜಿ.ಪಂ ಸದಸ್ಯರಾದ ಟಿ ಆರ್ ಕಾಗಲ , ಮಡ್ಡೆಪ್ಪಾ ತೋಳಿನವರ , ಕಾಂಗ್ರೇಸ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ , ನಗರಸಭೆ ಸದಸ್ಯ ಎಸ್.ಎ.ಕೋತವಾಲ , ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಜೀರ ಅಹ್ಮದ್ ಶೇಖ , ವಿವೇಕ ಜತ್ತಿ ಸೇರಿದಂತೆ ತಾ.ಪಂ , ಗ್ರಾ.ಪಂ , ನಗರಸಭೆ ಸದಸ್ಯರು ಭಾಗವಹಿಸಿದ್ದರು

Related posts: