ಮೂಡಲಗಿ:ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘಕ್ಕೆ ಎಲ್ಲ 24 ಸ್ಥಾನಗಳಿಗೆ ಅವಿರೋಧ ಆಯ್ಕೆ
ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘಕ್ಕೆ ಎಲ್ಲ 24 ಸ್ಥಾನಗಳಿಗೆ ಅವಿರೋಧ ಆಯ್ಕೆ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 4 :
ಜೂನ್ 13 ರಂದು ನಡೆಯಬೇಕಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಮೂಡಲಗಿ ತಾಲೂಕು ಘಟಕದ ಚುನಾವಣೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್.ಎಲ್. ಬಬಲಿ ಪ್ರಕಟಿಸಿದರು.
ಎಸ್.ಎಸ್. ಬಿರಾದಾರ(ಖಜಾನೆ ಇಲಾಖೆ), ಕಸ್ತೂರಿ ಪಡೆನ್ನವರ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಅವ್ವಣ್ಣಾ ಮಾರುತಿ ಮೋಡ್ಯಾರ(ಪ್ರೌಢ ಶಿಕ್ಷಣ), ಎಲ್.ಎಚ್. ಭೋವಿ(ಕಂದಾಯ), ಗೋಪಾಲ ಮುತ್ತೆಪ್ಪಗೋಳ(ಕಂದಾಯ), ಚನ್ನಬಸಪ್ಪ ನಾವಿ(ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ), ಡಾ.ರವಿಕುಮಾರ ಹುಕ್ಕೇರಿ(ಪಶು ಸಂಗೋಪನಾ ಇಲಾಖೆ), ಶ್ರೀಶೈಲ ಜಾಗನೂರ, ರಾಮಚಂದ್ರ ಸಣ್ಣಕ್ಕಿ, ಆನಂದ ಹಂಜ್ಯಾಗೋಳ, ಶಿವಲಿಂಗಪ್ಪ ಬಿ.ಪಾಟೀಲ, ಆರ್.ಟಿ.ಸೋನವಾಲ್ಕರ(ಆರೋಗ್ಯ ಇಲಾಖೆ), ಯಲ್ಲಪ್ಪ ಶೇಖರಗೋಳ(ಪದವಿ ಶಿಕ್ಷಣ), ಸದಾಶಿವ ಸವದತ್ತಿ, ವಿಠ್ಠಲ ಹುಲ್ಲಾರ, ಕಲ್ಲಪ್ಪ ಅಜ್ಜಪ್ಪನವರ, ಆರ್.ಎಂ. ಮಹಾಲಿಂಗಪೂರ, ಶಿವನಗೌಡ ಪಾಟೀಲ(ಪ್ರಾಥಮಿಕ ಶಿಕ್ಷಣ ಇಲಾಖೆ), ಶಾನೂರ ನದಾಫ(ಅರಣ್ಯ ಇಲಾಖೆ), ಭಾಸ್ಕರ ಹಲಗಿ(ಕೃಷಿ ಇಲಾಖೆ), ಅನೀಲ ಮಾಂಗಳೇಕರ(ತೋಟಗಾರಿಕೆ ಇಲಾಖೆ), ರಂಗಪ್ಪ ಗುಜನಟ್ಟಿ(ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ), ಸುರಾಣಿ ಧೂಳಪ್ಪ (ಜಿಲ್ಲಾ ಪಂಚಾಯತ ಇಂಜನೀಯರಿಂಗ್ ಇಲಾಖೆ), ಸಿದ್ದನಗೌಡ ದುಂ. ಪಾಟೀಲ(ನ್ಯಾಯಾಂಗ ಇಲಾಖೆ) ಇವರುಗಳು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಅವರು ತಿಳಿಸಿದ್ದಾರೆ.
ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು 24 ಸ್ಥಾನಗಳಿಗೆ 24 ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ನಾಮಪತ್ರ ಸಲ್ಲಿಸಿದ ಎಲ್ಲರೂ ಅವಿರೋಧವಾಗಿ ಆಯ್ಕೆಯಾದರೆಂದು ಬಬಲಿ ಪ್ರಕಟಿಸಿದರು. ಸಂಘಕ್ಕೆ ಆಯ್ಕೆಯಾದ ಹೊಸ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಬಬಲಿ ಸಲ್ಲಿಸಿದರು.
ಅಭಿನಂದನಾ ಸಮಾರಂಭ : ಎಲ್ಲ ಇಲಾಖೆಗಳನ್ನು ಒಗ್ಗೂಡಿಸಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವ ಕೀರ್ತಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ ಎಂದು ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಮಂಗಳವಾರದಂದು ಮೂಡಲಗಿ ತಾಲೂಕು ಘಟಕದ ನೂತನ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಎಲ್ಲ ಇಲಾಖೆಗಳ ನೌಕರರು ಒಗ್ಗಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮತಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರಿ ನೌಕರರ ಸಂಘದಲ್ಲಿಯೂ ಸಹ ಚುನಾವಣೆ ನಡೆಸದೇ ಎಲ್ಲ ಇಲಾಖೆಗಳ ನೌಕರರಲ್ಲಿ ಸಹಮತ ಮೂಡಿಸಿ ಎಲ್ಲ ವರ್ಗಗಳಿಗೂ ಪ್ರಾಶಸ್ತ್ಯ ಕಲ್ಪಿಸಿಕೊಟ್ಟಿದ್ದಾರೆ. ಇದರಲ್ಲಿ ಕೆಲವರಿಗೆ ಅತೃಪ್ತಿ ಆಗಿರಬಹುದು. ಆದರೆ ನೌಕರರ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಸಂಘದ ಪದಾಧಿಕಾರಿಗಳೊಂದಿಗೆ ಕೈಜೋಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಹೇಳಿದರು.
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ನೌಕರರ ಸಮಸ್ಯೆಗಳಿಗೆ ಸಂಘವು ಸ್ಪಂದನೆ ಮಾಡುವಂತಾಗಬೇಕು. ವೃತ್ತಿಯ ಜೊತೆಗೆ ಇನ್ನೀತರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸಂಘಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು. ಐದು ವರ್ಷಗಳ ಅವಧಿಯಲ್ಲಿ ನೌಕರರ ಕಷ್ಟ-ಕಾರ್ಪಣ್ಯಗಳು, ವೇತನ ಸಮಸ್ಯೆ, ಎನ್‍ಪಿಎಸ್ ಸೇರಿದಂತೆ ಸರ್ಕಾರಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಈಡೇರಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ನೌಕರರ ಸಂಘದ್ದಾಗಿದೆ. ಜೊತೆಗೆ ತಮ್ಮ ನೌಕರಿ ಜೊತೆಗೆ ನಾಗರೀಕ ಸಮಸ್ಯೆಗಳನ್ನು ಸಹ ಬಗೆಹರಿಸಬೇಕೆಂದು ಮನ್ನಿಕೇರಿ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಯುವ ಧುರೀಣ ನಾಗಪ್ಪ ಶೇಖರಗೋಳ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಉಪಸ್ಥಿತರಿದ್ದರು.