ಗೋಕಾಕ:ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಎಚ್.ಆರ್. ಅರುಣಕುಮಾರ
ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಎಚ್.ಆರ್. ಅರುಣಕುಮಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 5 :
ಇಂದಿನ ಯುವ ಜನಾಂಗ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉದ್ಯೋಗಿಗಳಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಹೋಂಡಾ ಮೋಟಾರ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‍ನ ಎಚ್.ಆರ್. ಅರುಣಕುಮಾರ ಹೇಳಿದರು.
ನಗರದ ಕೆಎಲ್‍ಇ ಸಂಸ್ಥೆಯ ಆಯ್‍ಟಿಐ ಕಾಲೇಜಿನಲ್ಲಿ ಆಯ್‍ಟಿಆಯ್ ವಿದ್ಯಾರ್ಥಿಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡ 2ನೇ ನೇರ ಉದ್ಯೋಗ ಸಂದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನಿದಿಂದ ಯಶಸ್ಸು ಸಿಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳಿವೆ. ವಿದ್ಯಾರ್ಥಿಗಳು ತಾವು ಕಲಿತ ಕೌಶಲ್ಯಗಳ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿರೆಂದು ಹಾರೈಸಿದರು.
ವೇದಿಕೆ ಮೇಲೆ ಸ್ಥಳಿಯ ಕೆಎಲ್‍ಇ ಸಂಸ್ಥೆಗಳ ಅಧ್ಯಕ್ಷ ಎಮ್.ಡಿ.ಚುನಮರಿ, ಪ್ರಾಚಾರ್ಯ ಪದ್ಮಭೂಷಣ ಪಾಟೀಲ ಇದ್ದರು.
ಈ ನೇರ ಉದ್ಯೋಗ ಸಂದರ್ಶನದಲ್ಲಿ ವಿವಿಧ ಕಾಲೇಜುಗಳ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು 120 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆಂದು ಸಂಘಟಕರು ತಿಳಿಸಿದರು.
ಕೆ.ಬಿ.ಕುಲಕರ್ಣಿ ಸ್ವಾಗತಿಸಿದರು, ವಿ.ಜೆ.ವಾಲಿ ನಿರೂಪಿಸಿದರು, ಜೆ.ಕೆ.ಕಡಿ ವಂದಿಸಿದರು.