RNI NO. KARKAN/2006/27779|Friday, October 18, 2024
You are here: Home » breaking news » ರಾಮದುರ್ಗ:ಎಸ್.ಐ ಆವಟೆಯನ್ನು ಕೂಡಲೆ ಅಮಾನತು ಮಾಡಿ : ರಾಮದುರ್ಗ ತಾಲೂಕಿನ ಪತ್ರಕರ್ತರ ಆಗ್ರಹ

ರಾಮದುರ್ಗ:ಎಸ್.ಐ ಆವಟೆಯನ್ನು ಕೂಡಲೆ ಅಮಾನತು ಮಾಡಿ : ರಾಮದುರ್ಗ ತಾಲೂಕಿನ ಪತ್ರಕರ್ತರ ಆಗ್ರಹ 

ಎಸ್.ಐ ಆವಟೆಯನ್ನು ಕೂಡಲೆ ಅಮಾನತು ಮಾಡಿ : ರಾಮದುರ್ಗ ತಾಲೂಕಿನ ಪತ್ರಕರ್ತರ ಆಗ್ರಹ
ರಾಮದುರ್ಗ ಜು 11: ಸುದ್ದಿ ಮಾಡಲು ತೆರಳಿದ ಖಾನಪೂರ ತಾಲೂಕಿನ ಪತ್ರಕರ್ತ ಪ್ರಸನ್ನ ಕುಲಕರ್ಣಿ ಮೇಲೆ ನಂದಗಡ ಪಿ.ಎಸ್. ಯುವ.ಎಸ್.ಆವಟೆ ಹಲ್ಲೆ ಮಾಡಿರುವದನ್ನು ಖಂಡಿಸಿ ರಾಮದುರ್ಗ ತಾಲೂಕಿನ ಪತ್ರಕರ್ತರ ಬಳಗದವರು ಮಂಗಳವಾರ ಮಿನಿ ವಿಧಾನಸೌಧಕ್ಕೆ ತೆರಳಿ ಬೈಲಹೊಂಗಲ ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಮಾಜದ ಅಂಕುಡೊಂಕುಗಳನ್ನು ನಿರ್ಭಯವಾಗಿ ತಿದ್ದುವ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಜೀವಭಯವೊಡ್ಡಿ ಸಾರ್ವಜನಿಕರವಾಗಿ ಪೊಲೀಸ್ ಠಾಣೆಗೆ ಎಳೆದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಎಸ್.ಐ ಯು.ಎಸ್.ಆವಟೆ ಅವರನ್ನು ಕೂಡಲೆ ಅಮಾನತು ಮಾಡಬೇಕು. ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಸಹರಿಸಿಕೊಂಡು ಹೋದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆ ಬರುದಿಲ್ಲವೆಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ರೀತಿ ದೌರ್ಜನ್ಯ ಮಾಡಿರುವ ಸಿಬ್ಬಂದಿಯಿಂದ ಇಡಿ ಇಲಾಖೆಗೆ ಕಪ್ಪು ಚುಕ್ಕಿಯಾಗಿದೆ. ಇಂತಹ ಘಟನೆಗಳನ್ನು ಮರುಕಳಿಸದಂತೆ ಮೇಲಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಬೇಕು. ತಪ್ಪು ಮಾಡಿರುವ ನಂದಗಡ ಎಸ್.ಐ ಆವಟೆ ಅವರನ್ನು ತಕ್ಷಣದಲ್ಲಿ ಅಮಾನತು ಮಾಡಬೇಕು. ಇಲ್ಲದಿದ್ದರೆ ರಾಜ್ಯಾಧ್ಯಂತ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಮಲ್ಲಿಕಾರ್ಜುನರಡ್ಡಿ ಗೊಂದಿ, ಸದಸ್ಯ ಮಲ್ಲಿಕಾರ್ಜುನ ದೂಪದ, ಸೋಮಶೇಖರ ಸೊಗಲದ ಮಾತನಾಡಿ ಪೊಲೀಸ್ ದೌಜ್ಯವನ್ನು ಖಂಡಿಸಿದರು.
ಬೈಲಹೊಂಗಲ ಎಸಿ ವಿಜಯಕುಮಾರ ಹೊನಕೇರಿ, ಗ್ರೇಡ್-1 ತಹಸೀಲ್ದಾರ ಕಟ್ಟಿ, ಗ್ರೇಡ್-2 ತಹಸೀಲ್ದಾರ ವಿಜಯಕುಮಾರ ಕಡಕೋಳ ಅವರು ಪತ್ರಕರ್ತರ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ರವಾಸಿಸುವದಾಗಿ ತಿಳಿಸಿದರು.
ಪತ್ರಕರ್ತರಾದ ವೈ.ಎಚ್.ಮುನವಳ್ಳಿ, ಸುಭಾಸ ಘೋಡಕೆ, ಚನ್ನಪ್ಪ ಮಾದರ, ವಿಜಯ ನಾಯಕ, ಈರನಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಎಸ್.ಕೆ.ಪಟ್ಟಣ, ಈರಣ್ಣ ಬುಡ್ಡಾಗೋಳ, ರವಿ ಸದಾಶಿವನವರ, ರಮೇಶ ರಾಯಭಾಗ, ಲಕ್ಷ್ಮಣ ರಾಯಭಾಗ, ಡಿ.ಎಫ್.ಹಾಜಿ, ಪ್ರಕಾಶ ಅಸೂಂಡಿ, ಬಿ.ಡಿ.ಹುದ್ದಾರ, ಮತ್ತು ಕಮ್ಮಾರ, ಗೋಪಾಲ ಮಾದರ ಉಪಸ್ಥಿತರಿದ್ದರು.

Related posts: