RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ

ಗೋಕಾಕ:ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ 

ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 6 :

 
ಗಿಡ-ಮರಗಳನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡುವಂತೆ ನಗರಸಭೆ ಪರಿಸರ ಅಭಿಯಂತರ ಎಮ್.ಎಚ್.ಗಜಾಕೋಶ ಹೇಳಿದರು.
ಗುರುವಾರದಂದು ನಗರದ ಹೊರವಲದಲ್ಲಿರುವ ನಗರ ಸಭೆ ಘನ ತಾಜ್ಯ ವಸ್ತುಗಳ ವಿಲೇವಾರಿ ಹಾಗೂ ಸಂಸ್ಕøರಣಾ ಘಟಕದ ಆವರಣದಲ್ಲಿ ಇಲ್ಲಿಯ ಜೆಸಿಐ ಸಂಸ್ಥೆ ಮತ್ತು ನಗರಸಭೆಯವರು ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಪರಿಸರ ಸಮತೋಲನಕ್ಕೆ ಶೇಕಡಾ 33% ರಷ್ಟು ಅರಣ್ಯ ಪ್ರದೇಶದ ಅವಶ್ಯಕತೆ ಇದ್ದು ಈಗ ಶೇ 24% ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಎಲ್ಲರೂ ಸಸಿಗಳನ್ನು ನಡೆವ ಮೂಲಕ ಪಾಲನೆ ಪೋಷಣೆ ಮಾಡಿ ಪರಿಸರ ಸಮತೋಲನವನ್ನು ಕಾಪಾಡಲು ಮುಂದಾಗಬೇಕು. ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು. ವಾಯುಮಾಲಿನ್ಯವನ್ನು ತಡೆಗಟ್ಟಬೇಕು. ಇದಕ್ಕೆ ಜನತೆ ಜಾಗೃತರಾಗಿ ಪರಿಸರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ಪೌರಾಯುಕ್ತ ವಿ.ಎಸ್.ತಡಸಲೂರ,ನಗರಸಭೆ ಅಧಿಕಾರಿಗಳಾದ ಎಮ್.ಎನ್.ಸಗರೇಕರ, ಆರ್.ಎಸ್.ರಂಗಸುಭೆ, ಕೆ.ಎಸ್.ಕೋಳಿ, ಜೆಸಿಐ ಸಂಸ್ಥೆಯ ಅಧ್ಯಕ್ಷ ಮಹಾವೀರ ಖಾರೆಪಾಠಣ, ಪದಾಧಿಕಾರಿಗಳಾದ ವಿಷ್ಣು ಲಾತೂರ, ಕೆಂಪಣ್ಣ ಚಿಂಚಲಿ, ಧನ್ಯಕುಮಾರ ಕಿತ್ತೂರ, ರಜನಿಕಾಂತ ಮಾಳೋದೆ, ರಾಚಪ್ಪ ಅಮ್ಮಣಗಿ, ರವಿ ಮಾಲದಿನ್ನಿ, ವಿಜಯಕುಮಾರ ಖಾರೇಪಾಠಣ, ಕೃಷ್ಣಾ ಕುರಬಗಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: