ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯ
ಧಾರವಾಡ : ಶರಣ ಸಂಸ್ಕøತಿಯ ಮಹಾನುಭಾವರಿಂದ ಈ ಮಹಾವಿದ್ಯಾಲಯ ಪ್ರಾರಂಭಗೊಂಡಿದ್ದು, ಸನ್ಮಾರ್ಗದಿಂದ ಮುನ್ನಡೆಯುತ್ತಿದೆ. ಈ ಪುಣ್ಯ ಸಂಸ್ಕøತಿಯ ಹಿನ್ನೆಲೆಯುಳ್ಳ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರೆಲ್ಲರು ಉತ್ತಮ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ಹೇಳಿದರು.
ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ.(ಶ್ರೀಮತಿ) ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ,(ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಮುಕ್ತಾಯ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ವ್ಯಕ್ತಿ ತನ್ನ ಸರ್ವತೋಮುಖ ಬೆಳವಣಿಗೆಗೆ ಮೊದಲು ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ಪ್ರತಿಯೊಬ್ಬರು ಸ್ಪರ್ಧಾ ಮನೋಭಾವ ಹಾಗೂ ಭಾಗವಹಿಸುವ ಆಸಕ್ತಿ ಹೊಂದಬೇಕು. ಜೀವನದಲ್ಲಿ ಸೋಲು ಗೆಲುವುಗಳನ್ನು ಸಮಾನ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ದೇಶದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದ್ದು, ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದು ಆರ್ಥಿಕ ಸ್ವಾವಲಂಬನೆಯನ್ನು ಹೊಂದಿ ಆತ್ಮಗೌರವವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಎಸ್. ವ್ಹಿ. ಬುಡಪನಹಳ್ಳಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಹಾತ್ಮರ ಚರಿತ್ರೆಯನ್ನು ಓದುವ ಮೂಲಕ ವಿದ್ಯಾರ್ಥಿಗಳು ಜ್ಞಾನವಂತರಾಗಿ ಮಹಾವಿದ್ಯಾಲಯಕ್ಕೆ ಹಾಗೂ ಸಮಾಜಕ್ಕೆ ಕೀರ್ತಿ ತರುವಂತವರಾಗಬೇಕೆಂದರು.
ಸಮಿತಿಯ ಗೌರವ ಕಾರ್ಯಾದರ್ಶಿ ಎಂ. ಸಿ. ಬಂಡಿ, ಕೋಶಾಧ್ಯಕ್ಷ ಎಸ್. ಜಿ. ಪಾಟೀಲ, ಎಂ. ಟಿ. ಮಲ್ಲಾಡದ, ಎಸ್. ಎಸ್. ಶಿವಳ್ಳಿ, ಪ್ರೋ. ಉಷಾದೇವಿ ಕೋಹಳ್ಳಿ, ಡಾ. ನಿರ್ಮಲಾ ಹಿರೇಗೌಡರ,ಪ್ರೋ ಶಕುಂತಲಾ ಬಿರಾದಾರ, ಡಾ. ನಿರ್ಮಲಾ ಹಿರೇಗೌಡರ, ಪ್ರೋ. ಶಾಂತಾ ಪಾಟೀಲಕುಲಕರ್ಣಿ ಪ್ರೋ. ಶೋಭಾ ಸಜ್ಜನ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ರಾಜೇಶ್ವರಿ ಸಾಲಿ ಸ್ವಾಗತಿಸಿದರು. ಸೌಜನ್ಯ ಮುನವಳ್ಳಿ ವಂದಿಸಿದರು.