29.ರಂದು ನಗರದಲ್ಲಿ ಬಸವ ಶೋಭಾ ಯಾತ್ರೆ
ಹುಬ್ಬಳ್ಳಿ : ವೀರಾಪುರ ಓಣಿಯಲ್ಲಿರುವ ಗುರುಬಸವ ಮಂಟಪದ ಸಭಾ ಭವನದಲ್ಲಿ ಇದೇ ದಿ. 29 ರವರೆಗೆ ಬಸವ ಜಯಂತಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಗುರು ಬಸವ ಮಂಟಪ ಟ್ರಷ್ಟ ಕಮೀಟೀಯ ಶಶಿಧರ ಕರವೀರಶೆಟ್ಟರ ಹೇಳಿದರು. ನಗರದ ಪತ್ರ ಕತ್ರ ಭವನದಲ್ಲಿ ನಿನ್ನೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ದಿ 26ರಿಂದ 28 ರವರೆಗೆ ಮೂರು ದಿನಗಳ ಕಾಲ ವಚನ ವಯಭವ, ಅನುಭಾವ ಸೌರಭ ಹಾಗೂ ವಚನ ಪಾರಾಯಣ ಕುರಿತು ಉಪನ್ಯಾಸ ನಡೆಯಲಿದೆಯೆಂದರು. ದಿ. 29 ರಂದು ಮುಂಜಾನೆ 9 ಗಂಟೆಗೆ ವಿಸ್ವ ಗುರು ಬಸವೇಶ್ವರರ ಭಾವ ಚಿತ್ರ ಹಾಗೂ ಧರ್ಮ ಗ್ರಂಥ ವಚನಸಾಹಿತ್ಯದ ಭವ್ಯ ಮೆರವಣಿಗೆ (ಬಸವ ಶೋಭಾ ಯಾತ್ರೆ) ನಡೆಯಲಿದ್ದು ಅದಕ್ಕೂ ಮುನ್ನ ವಿಜಯಪುರ ಜಿಲ್ಲೆಯ ಮುರನಾಳದ ಶಿವಣ್ಣ ಶರಣರು ಷಟ್‍ಸ್ಥಲ ದ್ವಜಾ ರೋಹಣ ನಡೆಸಲಿದ್ದಾರೆಂದು ಅವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸುಲೋಚನಾ ಭೂಸನೂರ,ವಿ ಎಸ್ ಲಿಗಾಡೆ, ಬಸವೇಶ ಕರವೀರ ಶೆಟ್ಟರ್, ಗುರುಸಿದ್ಧಪ್ಪಾ ಉಮದಿ, ಸುಧೀರ ಸಾದರತಹಳ್ಳಿ ಮತ್ತೀತರರಿದ್ದರು.
Related posts:
Posted in: ಮುಖಪುಟ